ಬೆಂಗಳೂರಲ್ಲಿ ಮತ್ತೆ ರಿಯಲ್ ಎಸ್ಟೇಟ್ ಪರ್ವ

Bangalore new Hot Spot for Real Estate
ಬೆಂಗಳೂರು , ಜೂ.13:ಉದ್ಯೋಗಸ್ಥರಿಗೆ ಅಥವಾ ನಿವೃತ್ತ ಜೀವನ ನಡೆಸಲು ಮುಂಬೈ ನಂತರ ಬೆಂಗಳೂರು ಉತ್ತಮ ಎಂಬುದು ಅನೇಕಾನಕ ಸಮೀಕ್ಷೆಗಳಿಂದ ಸಾಬೀತಾಗಿದೆ. ದೇಶದ ಮಾಹಿತಿ ತಂತ್ರಜ್ಞಾನ ರಾಜಧಾನಿ ಎಂದೂ ಹೆಸರು ಪಡೆದಿರುವ ಬೆಂಗಳೂರು ಇಂದು ಪರಭಾಷಿಗರ ನಾಡು ಆಗಿ ಹೋಗಿದ್ದು ಇಲ್ಲಿನ ಮೂಲ ನಿವಾಸಿಗಳೇ ಅಲ್ಪ ಸಂಖ್ಯಾತರಾಗುತ್ತಿರುವುದು ದುರಂತವೇ ಹೌದು.

ಕಳೆದೆರಡು ವರ್ಷಗಳಿಂದ ಜಾಗತಿಕ ಆರ್ಥಿಕ ಹಿಂಜರಿತದಿಂದ ಸೊರಗಿದ್ದ ಮಾಹಿತಿ ತಂತ್ರಜ್ಞಾನ ಕಂಪೆನಿಗಳಲ್ಲಿ ಇದೀಗ ಚಟುವಟಿಕೆ ಹೆಚ್ಚಿದ್ದು ನೇಮಕಾತಿ ಪ್ರಕ್ರಿಯೆ ಚುರುಕುಗೊಂಡಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ಬಾಡಿಗೆ ಮನೆ, ಗೃಹ ನಿವೇಶನ ಮತ್ತಷ್ಟು ದುಬಾರಿಯಾಗಿದೆ.

ದೇಶದ ಮಾಹಿತಿ ತಂತ್ರಜ್ಞಾನ ಉದ್ಯಮದ ರಫ್ತಿನಲ್ಲಿ ಬೆಂಗಳೂರಿನ ಪಾಲು ಶೇ.33 ಆಗಿದೆ. ಬೆಂಗಳೂರಿನಲ್ಲಿ 10,000 ಕ್ಕೂ ಅಧಿಕ ಮಿಲಿಯನೇರ್ ಗಳಿದ್ದು, 60,000 ಕ್ಕೂ ಅಧಿಕ ಅತೀ ಶ್ರೀಮಂತ ವ್ಯಕ್ತಿಗಳಿದ್ದಾರೆ.

ಸಂಪರ್ಕ ಸಂಸ್ಥೆ ಕುಶ್ ಮಾನ್ ಮತ್ತು ವೇಕ್ ಫೀಲ್ಡ್ ಪ್ರಕಾರ ಬೆಂಗಳೂರಿನಲ್ಲಿ ಈ ವರ್ಷ 12.24 ದಶಲಕ್ಷ ಚದರ ಅಡಿಗಳ ಕಚೇರಿ ಸ್ಥಳಾವಕಾಶಕ್ಕೆ ಬೇಡಿಕೆ ಇದೆ. ಇದು ಕಳೆದ ವರ್ಷಕ್ಕಿಂತ ದ್ವಿಗುಣಗೊಂಡಿದೆ.

ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ 2.54 ಲಕ್ಷ ಚದರ ಅಡಿಗಳ ಕಛೇರಿ ಸ್ಥಳಾವಕಾಶಕ್ಕೆ ಬೇಡಿಕೆ ಉಂಟಾಗಿದ್ದು, ಇದು ಕಳೆದ ಎರಡು ವರ್ಷಗಳ ಅಧಿಕ ಎನ್ನಲಾಗಿದೆ. ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಶ್ರೀಮಂತರ ಹೂಡಿಕೆ ಅಧಿಕವಾಗಿದೆ ಎಂದೂ ಸಂಶೋಧನೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+