ಮದ್ರಸಾ, ಮಸೀದಿಗಳಲ್ಲಿ ಮೊಳಗಲಿದೆ ಕನ್ನಡ ಕಹಳೆ
ಬೆಂಗಳೂರು,
ಜೂ.12: ಮುಸ್ಲಿಂ ಬಾಂಧವರಲ್ಲಿ ಕನ್ನಡ ಕಲಿಕೆಯನ್ನು ಪ್ರೋತ್ಸಾಹಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂದಡಿ ಇಟ್ಟ್ಟಿದೆ. ಮದ್ರಸಾ ಮತ್ತು ಮಸೀದಿಗಳಲ್ಲಿ "ಕನ್ನಡ ಕಲಿಕೆ ಮತ್ತು ಸಾಂಸ್ಕೃತಿಕ ಶಿಬಿರ"ಗಳನ್ನು ಹಮ್ಮಿಕೊಳ್ಳಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ. ಈ ಮೂಲಕ ಮದ್ರಸಾ ಮತ್ತು ಮಸೀದಿಗಳಲ್ಲಿ ಕನ್ನಡ ಕಹಳೆ ಮೊಳಗಲಿದೆ. id="toptextpromo">ಹಲವಾರು
ಸಮಸ್ಯೆಗಳ ಕಾರಣ ನಗರ ಪ್ರದೇಶದ ಬಹಳಷ್ಟು ಮುಸ್ಲಿಂ ಬಾಂಧವರು ಕನ್ನಡವನ್ನು ನಿರರ್ಗಳವಾಗಿ ಮಾತನಾಡಲು ಹಾಗೂ ಬರೆಯಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಮದ್ರಸಾಗಳಲ್ಲಿ ಹಾಗೂ ಮಸೀದಿಗಳಲ್ಲಿ ಕನ್ನಡ ಭಾಷಾ ಕಲಿಕೆಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಕನ್ನಡ
ಕಲಿಕೆಯ ಮೊದಲ ಶಿಬಿರವನ್ನು ಎಚ್ ಬಿಆರ್ ಲೇಔಟ್ ನ ಮೊದಲ ಹಂತದಲ್ಲಿರುವ ಫಲಹೇಧರೆನ್ ಮದ್ರಸಾದಲ್ಲಿ ಭಾನುವಾರ ಆರಂಭಿಸಲಾಗುತ್ತದೆ. ಉದ್ಘಾಟನಾ ಶಿಬಿರದಲ್ಲಿ ಸಂಸದ ಪಿ ಸಿ ಮೋಹನ್, ಶಾಸಕ ಕೆ ಜೆ ಜಾರ್ಜ್ ಹಾಗೂ ಹನೀಫ್ ಅಪ್ಸರ್ ಅನೀಜ್ ಅವರು ಭಾಗವಹಿಸಲಿದ್ದಾರೆ.











Click it and Unblock the Notifications