ಅಧಿಕ ತೆರಿಗೆ ಸಂಗ್ರಹ ಕೇಂದ್ರ ವಿತ್ತ ಸಚಿವರ ಗುರಿ

ಆದಾಯ ತೆರಿಗೆ ಇಲಾಖೆಯ ಮುಖ್ಯ ಕಮೀಷನರ್ ಗಳ ಮತ್ತು ಪ್ರಧಾನ ನಿರ್ದೇಶಕರ 26ನೇ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡುತಿದ್ದ ಸಚಿವರು ಗುರಿಗಿಂತ ಹೆಚ್ಚು ಹಣ ಸಂಗ್ರಹವನ್ನು ನಿರೀಕ್ಷಿಸುವಧಾಗಿ ಹೇಳಿದರು.
ಸರ್ಕಾರ ಈ ವರ್ಷ ನೇರ ತೆರಿಗೆ ಸಂಗ್ರಹದಲ್ಲಿ 4,30,000 ಕೋಟಿ ರೂಪಾಯಿಗಳ ಗುರಿ ಹಾಕಿಕೊಂಡಿದ್ದು ಕಳೆದ ವರ್ಷ 3,87,000 ಕೋಟಿ ರೂಪಾಯಿ ಸಂಗ್ರಹಣೆಯ ಗುರಿ ಹೊಂದಿತ್ತು.
ಸಣ್ಣ ನಗರಗಳೂ ಮತ್ತು ಪಟ್ಟಣಗಳಿಗೆ ತೆರಿಗೆ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ಆದಾಯ ಹೆಚ್ಚಿಸಬೇಕೆಂದು ಸಚಿವರು ಹೇಳಿದರು. ಹಿಂದಿನ ನೇರ ತೆರಿಗೆ ಸಂಗ್ರಹ ನಿಯಮಾವಳಿಗಳಿಂದ ಈಗಿನ ಹೊಸ ನೇರ ತೆರಿಗೆ ಸಂಗ್ರಹಾತಿಯ ನಿಯಮಾವಳಿಗಳಿನ್ನು ಜಾರಿಗೆ ತರಲು ಎದುರಿಸಬೇಕಾದ ಸವಾಲುಗಳ ಬಗ್ಗೆ ಅಧಿಕಾರಿಗಳಿಗೆ ತರಬೇತಿ ಸಂಸ್ಥೆಗಳಿಂದ ತರಬೇತಿ ಕೊಡಿಸುವದು ಅವಶ್ಯ ಎಂದೂ ಅವರು ಹೇಳಿದರು.
ಅಂತಾರ್ರಾಷ್ಟ್ರೀಯ ತೆರಿಗೆ ವಿಧಾನ ಮತ್ತು ಮಾಹಿತಿ ವಿನಿಮಯಕ್ಕೆ ಸರ್ಕಾರ ಸಿಂಗಪುರ ಮತ್ತು ಮಾರಿಷಸ್ ನಲ್ಲಿ ಎರಡು ತೆರಿಗೆ ಘಟಕಗಳನ್ನು ತೆರೆದಿದ್ದು, ಇದೇ ರೀತಿಯ 8 ಘಟಕಗಳನ್ನು ತೆರೆಯಲಾಗುವುದು ಎಂದೂ ಅವರು ಹೇಳಿದರು.












Click it and Unblock the Notifications