ರೇಷ್ಮೆ ಸೀರೆಯಲ್ಲಿ ತಿರುಕ್ಕುರುಳ್ ದ್ವಿಪದಿಗಳು
ಕೊಯಮತ್ತೂರು,
ಜೂ.10: ರೇಷ್ಮೆ ಸೀರೆ ಮೇಲೆ ಹೆಸರಾಂತ ತಮಿಳು ಸಂತ ಕವಿ ತಿರುವಳ್ಳುವರ್ ಅವರ ದ್ವಿಪದಿಗಳನ್ನು ಕಸೂತಿ ಮಾಡಲಾಗಿದ್ದು ಈ ಸೀರೆಯನ್ನು ಜೂ.23ರಿಂದ ನಡೆಯಲಿರುವ ಜಾಗತಿಕ ತಮಿಳು ಸಮ್ಮೇಳನದಲ್ಲಿ ಪ್ರದರ್ಶಿಸಲಾಗುತ್ತದೆ. id="toptextpromo">ಈ
ವಿಭಿನ್ನ ಸೀರೆಯ ಮೇಲೆ ತಿರುವಳ್ಳುವರ್ ಅವರ ಚಿತ್ರವನ್ನು ಬಿಡಿಸಲಾಗಿದ್ದು ಅವರ 1330 ದ್ವಿಪದಿಗಳನ್ನು ಹೆಣೆಯಲಾಗಿದೆ. ಒಟ್ಟು 1500 ಗ್ರಾಂ ಭಾರದ 6.25 ಮೀಟರ್ ಉದ್ದದ ಈ ಸೀರೆಯನ್ನು ಜೂ.23ರಂದು ಪ್ರದರ್ಶಿಸಲಾಗುತ್ತದೆ. ಕೋ-ಆಪ್ಟೆಕ್ಸ್ ನೇಯ್ದಿರುವ ಈ ಸೀರೆಯ ಬೆಲೆ ಒಂದು ಲಕ್ಷ ರುಪಾಯಿ. id='are-slot-1' class='oiad oi-axt oiadv'> id='top-searched-articles'>ಸೀರೆಯನ್ನು
ಸಿದ್ಧಪಡಿಸಲು ಸುಮಾರು ನಾಲ್ಕು ತಿಂಗಳು ಶ್ರಮಿಸಲಾಗಿದೆ. ಸೀರೆಯ ಮೇಲಿನ ಕಲಾತ್ಮಕ ಕಸೂತಿ ಕೆಲಸ ಅದ್ಭುತವಾಗಿದೆ. ನೇಕಾರರ ಕುಸುರಿ ಕೆಲಸ ಚಿತ್ತಾಕರ್ಷಕವಾಗಿದ್ದು ಸೀರೆಯನ್ನು ನೋಡಲು ಎರಡು ಕಣ್ಣು ಸಾಲದು ಎಂದು ಮಳಿಗೆಗೆ ಭೇಟಿ ನೀಡಿರುವ ಗ್ರಾಹಕರೊಬ್ಬರು ಉಧ್ಗಾರ ತೆಗೆದಿದ್ದಾರೆ.











Click it and Unblock the Notifications