ವಿಶ್ವಕಪ್ : ಬುಕ್ಕಿಗಳಿಗೂ ಸ್ಪೇನ್ ಫೇವರೀಟ್

ಜೋಹಾನ್ಸ್ ಬರ್ಗ್, ಜೂ.10: ವಿಶ್ವಕಪ್ 2010 ಕಪ್ ಗೆಲ್ಲುವ ನೆಚ್ಚಿನ ತಂಡ ಯಾವುದೂ ಎಂಬುದು ಎಲ್ಲರಿಗೆ ಕುತೂಹಲದ ಪ್ರಶ್ನೆ. ಕೆಲ ಸಮೀಕ್ಷೆಗಳು ಸ್ಪೇನ್ ಎಂದರೆ, ಮತ್ತೆ ಕೆಲವು ಬ್ರೆಜಿಲ್ ಪರ ನಿಂತಿವೆ. ಆದರೆ, ಬುಕ್ಕಿಗಳು ಸ್ಪೇನ್ ಗೆಲ್ಲುವ ನೆಚ್ಚಿನ ತಂಡ ಎಂದು ಬೆಟ್ಟಿಂಗ್ ಜಗತ್ತಿನಲ್ಲಿ ಸಾರಿದ್ದಾರೆ.

ಬುಕ್ಕಿಗಳ ಪ್ರಕಾರಸ್ಪೇನ್ ಹಾಗೂ ಬ್ರೆಜಿಲ್ ಅಂತಿಮ ಹಣಾಹಣಿಯಲ್ಲಿ ಸ್ಪರ್ಧಿಸಲಿವೆ. ಕಡಿಮೆ ಅಂತರದಿಂದ ಸ್ಪೇನ್ ವಿಜಯಿಯಾಗುತ್ತದೆ. ಮೂರನೇ ಫೇವರೀಟ್ ಆಗಿ ಇಂಗ್ಲೆಂಡ್ ಹೊರ ಹೊಮ್ಮಿದೆ.

ಫೀಫಾ ವಿಶ್ವಕಪ್ 2010 : ವಿಶ್ವಕಪ್ ವೇಳಾಪಟ್ಟಿ || ಅಂಕಗಳ ಪಟ್ಟಿ ||

ಅಕಸ್ಮಾತ್ ಬ್ರೆಜಿಲ್ ಏನಾದರೂ ಸೆಮಿಸ್ ನಲ್ಲಿ ಎಡವಿದರೆ, ಇಂಗ್ಲೆಂಡ್ ಫೈನಲ್ ಗೆ ಬರುವುದು ಖಚಿತ. ಸ್ಪೇನ್ , ಬ್ರೆಜಿಲ್, ಇಂಗ್ಲೆಂಡ್ ಸೆಮಿಸ್ ಪ್ರವೇಶ ಖಚಿತ ಎಂದ ಮೇಲೆ ನಾಲ್ಕನೆ ತಂಡ ಯಾವುದು ಎಂದರೆ, ಜರ್ಮನಿ ಎನ್ನುತ್ತಾರೆ ಬುಕ್ಕಿಗಳು.

ಹಾಲಿ ಚಾಂಪಿಯನ್ ಇಟಲಿ ಹಾಗೂ ಅರ್ಜೆಂಟೀನಾ ಅಂತಿಮ ನಾಲ್ಕರ ಘಟ್ಟ ತಲುಪುವುದು ಕಷ್ಟ ಎಂಬುದು ಬೆಟ್ಟಿಂಗ್ ಬಾದ್ ಷಹಗಳ ಅಭಿಮತ. ವಿಶ್ವಕಪ್ ಗಳಲ್ಲಿ ಜರ್ಮನಿ ಸಾಧನೆ ಅದ್ಭುತವಾಗೆ ಇದೆ. ಇಂಗ್ಲೆಂಡ್ ನ ರೂನಿ, ಲಿಯೊನೆಲ್ ಮೆಸ್ಸಿ ಅಥವಾ ಡೇವಿಡ್ ವಿಲ್ಲಾ ಗೋಲ್ಡನ್ ಬೂಟ್ ಧರಿಸುವ ಎಲ್ಲಾ ಲಕ್ಷಣಗಳಿವೆ ಎಂಬುದು ಬುಕ್ಕಿಗಳ ಮಾತು.

ನೆಲ್ಸನ್ ಸಂಸ್ಥೆ ವರದಿ:ನೆಲ್ಸನ್ ಸಂಸ್ಥೆ ಬಿಡುಗಡೆ ಮಾಡಿರುವ ಸಮೀಕ್ಷೆ ಪ್ರಕಾರ ಈ ಬಾರಿಯ ವಿಶ್ವಕಪ್ ಗೆ ಮುತ್ತಿಕ್ಕುವ ದೊರೆ ಕಾಕಾ. ಈ ಸಮೀಕ್ಷೆಯಂತೆ ಬ್ರೆಜಿಲ್ ಬೇರೆಲ್ಲಾ ದೇಶಗಳಿಗಿಂತ ಸುಮಾರು ಶೇ.25 ಕ್ಕೂ ಹೆಚ್ಚ್ಚು ಮತಗಳಿಸಿ ಮುಂದಿದೆ. ನಂತರದ ಸ್ಥಾನದಲ್ಲಿ ಅರ್ಜೆಂಟೀನಾ, ಇಂಗ್ಲೆಂಡ್, ಜರ್ಮನಿ ಇದೆ. ಹಾಲಿ ಚಾಂಪಿಯನ್ ಇಟಲಿಗೆ ಶೇ.6 ಜನ ಮಾತ್ರಮತ ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+