ವಿಶ್ವದ ಟಾಪ್ 5ನೇ ಸ್ಥಾನದಲ್ಲಿ ಭಾರ್ತಿಏರ್ ಟೆಲ್
ನವದೆಹಲಿ,
ಜೂ.9: ದೇಶದ ಅತೀ ದೊಡ್ಡ ಟೆಲಿಕಾಂ ಕಂಪೆನಿ ಭಾರ್ತಿ ಏರ್ ಟೆಲ್ ಮಂಗಳವಾರ ಕುವೈತ್ ಮೂಲದ ಝೈನ್ ಟೆಲಿಕಾಮ್ ಕಂಪೆನಿಯ ಆಫ್ರಿಕಾದ ವ್ಯವಹಾರಗಳನ್ನು ಖರೀದಿಸಿತು. ಒಟ್ಟು 50,800 ಕೋಟಿ ರೂಪಾಯಿ ಮೊತ್ತದ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿದೆ. ಇದರೊಂದಿಗೆ ವಿಶ್ವದ ಐದನೇ ಅತಿದೊಡ್ಡ ಟೆಲಿಕಾಂ ಸೇವಾ ಸಂಸ್ಥೆ ಎಂಬ ಹೆಗ್ಗಳಿಕೆಗೆ ಭಾರ್ತಿ ಏರ್ ಟೆಲ್ ಪಾತ್ರವಾಗಿದೆ. id="toptextpromo">ಸುದ್ದಿಗಾರರೊಂದಿಗೆ
ಮಾತನಾಡಿದ ಭಾರ್ತಿಯ ಅದ್ಯಕ್ಷ ಸುನಿಲ್ ಮಿತ್ತಲ್ ಅವರು ದೇಶದ ಟೆಲಿಕಾಮ್ ಕಂಪೆನಿಯೊಂದು ವಿದೇಶದಲ್ಲಿ ಮಾಡಿದ ಅತೀ ಹೆಚ್ಚಿನ ಮೊತ್ತದ ಖರೀದಿ ಇದಾಗಿದ್ದು ಇದರಿಂದ ಎರಡೂ ಕಂಪೆನಿಗಳ ಒಟ್ಟು ಆದಾಯ 13 ಬಿಲಿಯನ್ ಡಾಲರ್ ಗಳಿಗೇರಲಿದೆ ಎಂದರು. ಕಳೆದ ಮಾರ್ಚ್ 30 ರಂದು ಭಾರ್ತಿ ಝೈನ್ ನ ಸೂಡಾನ್ ಮತ್ತು ಮೊರಾಕ್ಕೋ ಹೊರತುಪಡಿಸಿ ಆಫ್ರಿಕಾದ 15 ದೇಶಗಳಲ್ಲಿ ಹೊಂದಿರುವ ಆಸ್ತಿಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿತ್ತು. id='are-slot-1' class='oiad oi-axt oiadv'> id='top-searched-articles'>ಈ
ಹಿಂದೆ ದಕ್ಷಿಣ ಆಫ್ರಿಕಾದ ಎಮ್ ಟಿ ಎನ್ ಕಂಪೆನಿಯನ್ನು ಖರೀದಿಸಲು ಭಾರ್ತಿ ಎರಡು ಬಾರಿ ವಿಫಲ ಪ್ರಯತ್ನ ನಡೆಸಿತ್ತು. ಈ ಖರೀದಿಯಿಂದ ಭಾರ್ತಿ ವಿಶ್ವದ 5 ನೇ ಅತೀ ದೊಡ್ಡ ಟೆಲಿಕಾಮ್ ಕಂಪೆನಿಯಾಗಿ ಹೊರಹೊಮ್ಮಿದ್ದು, 189 ದೇಶಗಳಲ್ಲಿ ಒಟ್ಟು 179 ಮಿಲಿಯನ್ ಗ್ರಾಹಕರನ್ನು ಹೊಂದಿದಂತಾಗಿದೆ.











Click it and Unblock the Notifications