ಪೀಸ್ ಮತ್ತು ಪೇಷನ್ಸ್ ಬೇರ್ಪಡಿಸಿದ ವೈದ್ಯರು

ನೈಜೀರಿಯಾದ 8 ತಿಂಗಳ ಪುಟಾಣಿ ಹೆಣ್ಣು ಮಕ್ಕಳಾದ ಪೀಸ್ ಮತ್ತು ಪೇಷನ್ಸ್ ರನ್ನು ಖ್ಯಾತ ಮಕ್ಕಳ ತಜ್ಞ ಡಾ. ಆಶ್ಲೇ ನೇತೃತ್ವದ 30 ನುರಿತ ವೈದ್ಯರ ತಂಡ ಸತತ ಏಳು ಗಂಟೆಗಳ ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಬೇರ್ಪಡಿಸಿದೆ. ಆದರೆ, ಇಬ್ಬರ ದೇಹಸ್ಥಿತಿಯ ಬಗ್ಗೆ ತಿಳಿಯಲು ಇನ್ನೂ ಕೆಲ ಗಂಟೆ ಬೇಕು ಅಂತ ವೈದ್ಯರು ಹೇಳಿದ್ದಾರೆ.
ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾದ ಶಸ್ತ್ರಚಿಕಿತ್ಸೆ ಸಾಯಂಕಾಲ 4.12ಕ್ಕೆ ಮುಗಿದಿದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಹೆಚ್ಚು ರಕ್ತಸ್ರಾವವಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಇಬ್ಬರೂ ಮಕ್ಕಳನ್ನು ವೈದ್ಯರ ಎರಡು ತಂಡಗಳು ಪರೀಕ್ಷಿಸುತ್ತಿದ್ದು ಅವರಿಬ್ಬರ ದೇಹಸ್ಥಿತಿಯ ಬಗ್ಗೆ ತೀವ್ರ ನಿಗಾ ಇಟ್ಟಿದ್ದಾರೆ.
ಮಕ್ಕಳ ಪಾಲಕರಾದ ಇಮ್ಯಾನುಯೆಲ್ ಮತ್ತು ಕಂಫರ್ಟ್ ಆಡುಗ್ಬೆ ಆಶಾಭಾವದೊಂದಿಗೆ ಇಲ್ಲಿಗೆ ಬಂದಿದ್ದಾರೆ. ಎರಡು ವರ್ಷಗಳ ಹಿಂದೆ ನಾಲ್ಕು ಕೈಕಾಲುಗಳುಳ್ಳ ಲಕ್ಷ್ಮಿ ಇಲ್ಲಿಯೇ ಮರುಜನ್ಮ ಪಡೆದ ಕಥೆ ಕೇಳಿದ್ದ ಪಾಲಕರು ತಮ್ಮಿಬ್ಬರು ಮಕ್ಕಳನ್ನು ಯಶಸ್ವಿಯಾಗಿ ಬೇರ್ಪಡಿಸುವ ಬಗ್ಗೆ ವಿಶ್ವಾಸ ಹೊಂದಿದ್ದರು. ಮಕ್ಕಳು ಶಸ್ತ್ರಚಿಕಿತ್ಸೆಗೆ ಮೊದಲು ಆರೋಗ್ಯಕರವಾಗಿದ್ದವು. ಆದರೆ, ಆಂತರಿಕ ಭಾಗಗಳ ಬಗ್ಗೆ ಹೆಚ್ಚಿನ ವಿವರ ಇಲ್ಲದ್ದರಿಂದ ವೈದ್ಯರಿಗೆ ಸವಾಲಾಗಿತ್ತು.
ದೇವರು ನಮ್ಮೊಂದಿಗಿದ್ದಾನೆ, ಎಲ್ಲ ಸರಿಹೋಗುತ್ತದೆ ಎಂದು ಈ ಮಕ್ಕಳು ಮತ್ತು ಶಸ್ತ್ರಚಿಕಿತ್ಸೆ ಕುರಿತು ಶಸ್ತ್ರಚಿಕಿತ್ಸೆಯ ಮೊದಲು ಡಾ. ಆಶ್ಲೇ ಹೇಳಿದ್ದರು.












Click it and Unblock the Notifications