ಪೆಟ್ರೋಲ್, ಡೀಸೆಲ್ ದರ ಏರಿಕೆ ಶಾಕ್?
ನವದೆಹಲಿ,
ಜೂ.6: ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ದರ ಏರಿಕೆ ಸಾಧ್ಯತೆಗಳು ನಿಚ್ಚಳವಾಗಿದೆ. ಜೂನ್.7 ರಂದು ದರ ಏರಿಕೆ ಬಗ್ಗೆ ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಬೆಲೆ ಏರಿಕೆ ಕುರಿತ ನಿರ್ಧಾರವನ್ನು ಸಚಿವರ ಅಧಿಕಾರ ಸಮಿತಿ(EGoM) ಪ್ರಕಟಿಸಲಿದೆ. id="toptextpromo">ಪೆಟ್ರೋಲ್
ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ 3.50 ರು ಹೆಚ್ಚಳವಾಗುವ ಸಾಧ್ಯತೆಯಿದೆ. ಅಡುಗೆ ಅನಿಲದ ದರ ಪ್ರತಿ ಸಿಲಿಂಡರ್ ಗೆ 25 ರುಪಾಯಿಗಳಿಂದ 50 ರುಪಾಯಿಗಳ ವರೆಗೂ ಹೆಚ್ಚಾಗುವ ಸಾಧ್ಯತೆಯಿದೆ. ಸಿಮೇಎಣ್ಣೆ ಬೆಲೆಯನ್ನು ಸಹ ಕಡಿಮೆ ಪ್ರಮಾಣದಲ್ಲಿ ಏರಿಸುವ ಬಗ್ಗೆ ಸಚಿವರಸಮಿತಿ ಪರಿಶೀಲನೆ ನಡೆಸಲಿದೆ. id='are-slot-1' class='oiad oi-axt oiadv'> id='top-searched-articles'>ಕೇಂದ್ರ
ಹಣಕಾಸು ಸಚಿವ ಪ್ರಣಬ್ ಮುಖರ್ಜಿ ನೇತೃತ್ವದಲ್ಲಿ ಸಚಿವರ ಸಮಿತಿ ಸಭೆ ನಡೆಯಲಿದ್ದು, ಇಂಧನ ಬೆಲೆ ಏರಿಕೆ ನಿರ್ಧಾರ ಕೈಗೊಳ್ಳುವ ಮುನ್ನ, ಕೀರಟ್ ಪಾರೀಖ್ ವರದಿ ಶಿಫಾರಸ್ಸಿನ ಬಗ್ಗೆ ಕೂಡ ಚರ್ಚೆ ನಡೆಯಲಿದೆ. ಬೆಲೆ ಪರಿಷ್ಕರಣೆ ಮಾಡದಿದ್ದಲ್ಲಿ ಈ ಹಣಕಾಸು ವರ್ಷದಲ್ಲಿ ತೈಲ ಕಂಪೆನಿಗಳು ಒಟ್ಟು 72,300 ಕೋಟಿ ರೂಪಾಯಿಗಳ ನಷ್ಟ ಅನುಭವಿಸಬೇಕಾಗುತ್ತದೆ ಎನ್ನಲಾಗಿದೆ.











Click it and Unblock the Notifications