ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೇವಿಡ್ ಹೆಡ್ಲಿ ವಿಚಾರಣೆಗೆ ಭಾರತಕ್ಕೆ ಗ್ರೀನ್ ಸಿಗ್ನಲ್

By Rajendra
|
Google Oneindia Kannada News

India to interrogate david headley
ವಾಷಿಂಗ್ಟನ್, ಜೂ.5: ಸುದೀರ್ಘ ಸಮಯದಿಂದ ಕುಂಟುತ್ತಾ ಎಡವುತ್ತಾ ಸಾಗುತ್ತಿರುವ ಹೆಡ್ಲಿ ವಿಚಾರಣೆ ವಿಷಯ ಕಟ್ಟಕಡಗೆ ಪರಿಹಾರ ಕಂಡಿದೆ. ಮುಂಬೈ ಸ್ಫೋಟದ ರೂವಾರಿ, ಲಷ್ಕರ್ ತೋಯ್ಬಾಗೆ ಸೇರಿದ ಪಾಕಿಸ್ತಾನ ಮೂಲದ ಅಮೆರಿಕ ಪ್ರಜೆ ಡೆವಿಡ್ ಕೋಲಮನ್ ಹೆಡ್ಲಿ ಅಮೆರಿಕಾದಲ್ಲಿರುವ ಕಾರಣ ಆತನ ವಿಚಾರಣೆಗೆ ಆ ದೇಶದ ಅನುಮತಿ ಬೇಕಾಗಿತ್ತು.

ಅಮೆರಿಕಾ ವಿದೇಶಾಂಗ ಸಚಿವಾಲಯ ಹಾಗೂ ಅಧ್ಯಕ್ಷರೊಂದಿಗೆ ಈ ವಿಷಯ ಬಹಳಷ್ಟು ಚರ್ಚೆಗೆ ಒಳಗಾಗಿತ್ತು. ಕಡೆಗೂ ಹೆಡ್ಲಿಯನ್ನು ವಿಚಾರಿಸಲು ಭಾರತಕ್ಕೆ ಅನುಮತಿ ಸಿಕ್ಕಿದೆ. ಪ್ರಸ್ತುತ ಹೆಡ್ಲಿ ಚಿಕಾಗೋದಲ್ಲಿದ್ದಾನೆ. ಉಳಿದ ವಿವರಗಳಿಗೆ ನಿರೀಕ್ಷಿಸುತ್ತಿದ್ದೇವೆ ಎಂದು ವೈಟ್ ಹೌಸ್ ಅಧಿಕಾರಿ ಜೋನ್ಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ತಮ್ಮ ಕರ್ತವ್ಯವನ್ನು ತಾವು ನಿರ್ವಹಿಸಿ ಉಗ್ರವಾದವನ್ನು ಹತ್ತಿಕ್ಕುವ ವಿಷಯದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ವೈಟ್ ಹೌಸ್ ಅಧಿಕಾರಿ ತಿಳಿಸಿದ್ದಾರೆ. ನವೆಂಬರ್ 26, 2008ರಲ್ಲಿ ಮುಂಬೈನಲ್ಲಿ ನಡೆದ ಸ್ಫೋಟದ ಪ್ರಮುಖ ರೂವಾರಿ ಡೇವಿಡ್ ಹೆಡ್ಲಿ. ಈತನ ಮೂಲ ಹೆಸರು ದಾವೂದ್ ಸೈಯದ್ ಗಿಲಾನಿ. ತಮ್ಮ ಹೆಸರನ್ನುಡೇವಿಡ್ ಹೆಡ್ಲಿ ಎಂದು ಕ್ರೈಸ್ತ ಹೆಸರಾಗಿ ಬದಲಾಯಿಸಿಕೊಂಡು ಭಾರತಕ್ಕೆ ಬಂದಿದ್ದ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X