ಮುಂಬೈನಲ್ಲಿ ಭಾರಿ ವಿಮಾನ ದುರಂತ ಜಸ್ಟ್ ಮಿಸ್
ಮುಂಬೈ,
ಜೂ.4: ಭಾರಿ ವಿಮಾನ ದುರಂತವೊಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಕೂದಳೆಲೆ ಅಂತರದಲ್ಲಿ ತಪ್ಪಿದೆ. ಕಿಂಗ್ ಫಿಷರ್ ವಿಮಾನ ಹಾಗೂ ಸ್ಪೈಸ್ ಜೆಟ್ ವಿಮಾನಗಳ ನಡುವೆ ಪರಸ್ಪರ ಡಿಕ್ಕಿ ಸಂಭವಿಸಬೇಕಾಗಿತ್ತು. ಆದರೆ ಎರಡು ವಿಮಾನಗಳು ಭಾರಿ ಅಪಘಾತದಿಂದ ಪಾರಾಗಿವೆ. id="toptextpromo">ಕಿಂಗ್
ಫಿಶರ್ ವಿಮಾನಕ್ಕೆ ಲ್ಯಾಂಡ್ ಆಗಲು ಸೂಚನೆ ಸಿಕ್ಕಿತ್ತು. ಆದರೆ ರಾತ್ರಿ 11 ಗಂಟೆಗೆ ಟೇಕ್ ಆಫ್ ಆಗಬೇಕಿದ್ದ ಮುಂಬೈ-ಚೆನ್ನೈ ಸ್ಪೈಸ್ ಜೆಟ್ ವಿಮಾನ ತಾಂತ್ರಿಕ ತೊಂದರೆಯಿಂದ ಅದೇ ರನ್ ವೇಯಲ್ಲಿ ನಿಂತಿತ್ತು. ಅದೇ ಸಮಯದಲ್ಲಿ ದೆಹಲಿ-ಮುಂಬೈ ಕಿಂಗ್ ಫಿಶರ್ ಏರ್ ಲೈನ್ಸ್ ವಿಮಾನ ಆಗಮಿಸಿದೆ. ಆ ವಿಮಾನಕ್ಕೆ ಅದೇ ರನ್ ವೇಯಲ್ಲಿ ಲ್ಯಾಂಡ್ ಆಗಲು ಸೂಚಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಬಳಿಕ
ಎಚ್ಚೆತ್ತುಕೊಂಡ ಏರ್ ಟ್ರಾಫಿಕ್ ಕಂಟ್ರೋಲರ್ ಕಿಂಗ್ ಫಿಶರ್ ವಿಮಾನ ಲ್ಯಾಂಡ್ ಆಗದಂತೆ ಸೂಚನೆ ನೀಡಿದ್ದಾರೆ. ಕೂದಲೆ ಟೇಕಾಫ್ ಆದ ಕಿಂಗ್ ಫಿಶರ್ ವಿಮಾನ ಬಳಿಕ ಮತ್ತೊಂದು ರನ್ ವೇ ಮೇಲೆ ಲ್ಯಾಂಡ್ ಆಗಿದೆ. ಜೀವ ಅಂಗೈಯಲ್ಲಿ ಹಿಡಿದುಕೊಂಡಿದ್ದ ಎರಡು ವಿಮಾನಗಳಲ್ಲಿನ 400 ಮಂದಿ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.











Click it and Unblock the Notifications