ಹೊರಗುತ್ತಿಗೆಗೆ ಕಡಿವಾಣ, ಸ್ಥಳೀಯರಿಗೆ ಆದ್ಯತೆ

ಸ್ಥಳೀಯರಿಗೆ ಆದ್ಯತೆ: ಅಮೆರಿಕದ ಐಬಿಎಂ ಮತ್ತು ಜಿಇ ಕಂಪೆನಿಗಳು ಕೆಲಸದ ಹೊರಗುತ್ತಿಗೆಯನ್ನು ಅಗ್ಗದ ದರದ ಕೆಲಸಗಾರರು ಸಿಗುವ ಭಾರತ ಮತ್ತಿತರ ದೇಶಗಳಿಗೆ ನೀಡುತ್ತಿರುವುದಕ್ಕೆ ಕಡಿವಾಣ ಹಾಕಲು ಕಂಪೆನಿಗಳ ಅಂತಾರಾಷ್ಟ್ರೀಯ ವಹಿವಾಟಿನ ಮೇಲೆ ತೆರಿಗೆ ವಿಧಿಸಲು ಹಾಗೂ ಆ ಮೂಲಕ ಅಮೇರಿಕಾದ ನಾಗರಿಕರಿಗೆ ಉದ್ಯೋಗಾವಕಾಶ ಹೆಚ್ಚಿಸಲು ನಿರ್ಧರಿಸಲಾಗಿದೆ.
ಕಳೆದ ತಿಂಗಳು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅಮೆರಿಕದ ಕೆಲಸ ಮತ್ತು ತೆರಿಗೆ ತಪ್ಪಿಸುವ ತಡೆ ಕಾಯ್ದೆ (American Jobs and Closing Tax Loopholes Act)ಯನ್ನು 215-204 ಮತಗಳಿಂದ ಸೆನೆಟ್ ಅಂಗೀಕರಿಸಿದೆ. ಸುಮಾರು 112 ಬಿಲಿಯನ್ ಡಾಲರ್ ವೆಚ್ಚದ ಈ ಕಾಯ್ದೆ ಯ ಕುರಿತು ಸೆನೆಟ್ ಜೂನ್ 7 ರಂದು ಚರ್ಚಿಸಲಿದೆ ಎನ್ನಲಾಗಿದೆ.
ಯುಎಸ್ ನಲ್ಲೂ ನಿರುದ್ಯೋಗ ಸಮಸ್ಯೆ: ಅಮೆರಿಕದಲ್ಲಿ ಪ್ರಸ್ತುತ ನಿರುದ್ಯೋಗ ಸಮಸ್ಯೆ ಶೇ 9.9 ಕ್ಕೇರಿದ್ದು ಕಾನೂನು ತಜ್ಞರ ಮೇಲೆ ಕೆಲಸ ಸೃಷ್ಟಿಸುವ ಒತ್ತಡ ಬಿದ್ದಿದ್ದು, ಬಹುರಾಷ್ಟ್ರೀಯ ಕಂಪೆನಿಗಳು ಅಮೆರಿಕದಲ್ಲಿ ತಮ್ಮ ನೌಕರರನ್ನು ಕೆಲಸದಿಂದ ತೆಗೆದು ಹಾಕಿ ಹೊರರಾಷ್ಟ್ರಗಳಲ್ಲಿ ಕೆಲಸಗಾರರನ್ನು ನೇಮಕ ಮಾಡಿಕೊಳ್ಳುತ್ತಿರುವದರ ವಿರುದ್ಧ ಕಠಿಣ ನಿಯಮಾವಳಿಗೆ ಮುಂದಾಗಿದ್ದಾರೆ.
ಭಾರತದ 60 ಬಿಲಿಯನ್ ಡಾಲರ್ ಮೌಲ್ಯದ ಹೊರಗುತ್ತಿಗೆ ವಹಿವಾಟು ನಡೆಸುತ್ತಿರುವ ಪ್ರಮುಖ ಗ್ರಾಹಕರಾದ ಜಿಇ ಮತ್ತು ಸಿಟಿ ಸಮೂಹ ನೂತನ ನಿಯಮಾವಳಿಯಿಂದ ಸದ್ಯಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.
ಕೆಲಸದ ಹೊರಗುತ್ತಿಗೆಗಿಂತ ಇದು ಅಮೆರಿಕದ ವಿಷಯವಾಗಿದೆ ಎಂದ ನಾಸ್ಕಾಮ್ ಅಧ್ಯಕ್ಷ ಸೋಮ್ ಮಿತ್ತಲ್ ಅವರು ಹೊಸ ಕಾಯ್ದೆಯಿಂದ ಅಮೆರಿಕದ ಕಂಪೆನಿಗಳ ಸ್ಪರ್ಧಾತ್ಮಕತೆ ಕಡಿಮೆಯಾಗಲಿದೆ ಎಂದರು. ಅಮೆರಿಕದ ಕಂಪೆನಿಯೊಂದು ಯೂರೋಪ್ ನಲ್ಲಿ ಗಳಿಸಿದ ಆದಾಯಕ್ಕೆ ಶೇ.15 ತೆರಿಗೆ ವಿಧಿಸಿದರೆ ಕಂಪೆನಿಯ ಮೇಲೆ ಎರಡರಷ್ಟು ಹೊಡೆತ ಬೀಳಲಿದೆ ಎಂದು ಅವರು ಹೇಳಿದರು.
ಸಿಟಿ ಗ್ರೂಪ್ ಚೇತರಿಕೆ: ಉದಾಹರಣೆಗೆ ಸಿಟಿ ಗ್ರೂಪ್ 2007 ರಲ್ಲಿ ತನ್ನ ಆದಾಯದ ಶೇ.52 ರಷ್ಟನ್ನು ಹೊರರಾಷ್ಟ್ರಗಳಿಂದ ಗಳಿಸಿದ್ದು ಇದರ ಶೇ.60ರಷ್ಟು ನೌಕರರು ಇತರ ದೇಶಗಳಲ್ಲಿದ್ದಾರೆ. ನೂರಕ್ಕೂ ಅಧಿಕ ದೇಶಗಳಲ್ಲಿ ಬ್ಯಾಂಕಿಂಗ್ ವಹಿವಾಟು ನಡೆಸುತ್ತಿರುವ ಸಿಟಿ ಸಮೂಹದ ಆದಾಯ ಜಾಗತಿಕ ಹಿಂಜರಿತದ ನಂತರ 2008 ರಲ್ಲಿ ಶೇ.74 ಹೆಚ್ಚಿದೆ.
ಭಾರತದ ಪ್ರಮುಖ ಕಂಪೆನಿಗಳಾದ ಟಿಸಿಎಸ್, ಇನ್ಫೋಸಿಸ್, ವಿಪ್ರೋ ಹಾಗೂ ಎಚ್ ಸಿಎಲ್ ಗಳು ಅಟ್ಲಾಂಟ ಮತ್ತು ಮಿಚಿಗನ್ ನಲ್ಲಿ ಸಾಫ್ಟ್ ವೇರ್ ಅಭಿವೃದ್ದಿ ಕೇಂದ್ರಗಳನ್ನು ತೆರೆದಿದೆ. ಟಿಸಿಎಸ್ ತನ್ನ ಅಮೆರಿಕದ ನೌಕರರ ಸಂಖ್ಯೆಯನ್ನು ಈಗಿನ 10 ಸಾವಿರದಿಂದ 20 ಸಾವಿರಕ್ಕೇರಿಸಲು ನಿರ್ಧರಿಸಿದೆ. ಮುಂದಿನ 3 ರಿಂದ 5 ವರ್ಷಗಳಲ್ಲಿ ತಮ್ಮ ವಿದೇಶಿ ನೌಕರರ ಸಂಖ್ಯೆಯನ್ನು ಈಗಿನ ಶೇ.5 ರಿಂದ ಶೇ.10-15ಕ್ಕೇರಿಸಲು ವಿಪ್ರೋ ಮತ್ತು ಇನ್ಫೋಸಿಸ್ ನಿರ್ಧರಿಸಿವೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications