ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲೆನಾಡಿನ'ಮಂಜಣ್ಣ' ರಾಜ್ಯಸಭೆಗೆ

By * ಡಾ. ಬಾಲಕೃಷ್ಣ ಹೆಗಡೆ, ಶಿವಮೊಗ್ಗ
|
Google Oneindia Kannada News

Ayanur Manjunath
ಶಿವಮೊಗ್ಗ, ಮೇ.31: ಶಿವಮೊಗ್ಗ ಜಿಲ್ಲೆ ರಾಜಕೀಯವಾಗಿ ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ನಾಡಿಗೆ ಗಣನೀಯ ಕೂಡುಗೆ ನೀಡಿದೆ ಎಂಬುದರಲ್ಲಿ ಎರಡು ಮಾತಿಲ್ಲ. ರಾಜಕೀಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಶಿವಮೊಗ್ಗ ತನ್ನದೇ ಛಾಪು ಮೂಡಿಸಿದೆ. ರಾಜ್ಯಸಭೆಗೆ ರಾಜ್ಯದಿಂದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಆಯನೂರು ಮಂಜಪ್ಪ ಅವರ ಕಿರು ಪರಿಚಯ ಇಲ್ಲಿದೆ.

ಇತ್ತೀಚಿನ ವರ್ಷಗಳಲ್ಲಿ ರಾಜಕೀಯದ ಮಾತೆತ್ತಿದೆರೆ ಬಿ.ಜೆ.ಪಿ. ಧುರೀಣ ಆಯನೂರು ಮಂಜುನಾಥ ಎಲ್ಲರ ಮನದಾಳದಲ್ಲಿ ನೆಲೆಯೂರುತ್ತಾರೆ. ರಾಜಕೀಯಕ್ಕೆ ಬೇರಾಗಿರುವ ವಾಕ್ಚಾತುರ್ಯ, ಸಂಘಟನಾ ಚತುರತೆ, ಸ್ನೇಹ ಭಾವ ಸದಾ ನಗುಮೊಗದ ಆಯನೂರು ಬಿ.ಜೆ.ಪಿ.ಗೆ ವರದಾನ ಎಂದರೂ ಅತಿಶಯೋಕ್ತಿಯಾಗಲಾರದು. ಆಯನೂರು ಮಂಜುನಾಥ ಅವರು ಮಲೆನಾಡಿಗರಿಗೆಲ್ಲ 'ಮಂಜಣ್ಣ' ಎಂದೇ ಪ್ರತೀತಿಯಾದವರು.

52 ವಯೋಮಾನದ ಮಂಜಣ್ಣ ಈಗ ರಾಜ್ಯಸಭೆಗೆ ಪ್ರವೇಶಿಸಲಿರುವ ಮಂಜಣ್ಣ ಕ್ರಮಿಸಿದ ದಾರಿ ಬಲು ರೋಚಕ. ವೃತ್ತಿಯಿಂದ ಕೃಷಿಕ, ವ್ಯಾಪಾರಸ್ಥರಾದ ಮಂಜುನಾಥ ಬಿ.ಎ. ಪದವಿಧರರು. ವಿದ್ಯಾರ್ಥಿ ದೆಸೆಯಿಂದಲೇ ವಿದ್ಯಾರ್ಥಿ ಸಂಘಟನೆಗಳ ಜವಬ್ದಾರಿ ಹೊತ್ತವರು. 1975-77 ರಲ್ಲಿ ವಿದ್ಯಾರ್ಥಿ ಯುವ ಘಟಕದ ವಿಭಾಗ ಕಾರ್ಯದರ್ಶಿಯಾಗಿ 1977-78 ರಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯನೂರು ಸಾರ್ವಜನಿಕ ಜೀವನ ಪ್ರವೇಶಿಸಿದರು.

1994 ರಲ್ಲಿ ಇವರು ಹೊಸನಗರ ವಿಧಾನ ಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಅದರೆ 1996ರಲ್ಲಿ ನಡೆದ ಲೋಕಸಭಾ ಚುನಾವಣೆಗೆ ಇವರು ರಾಜಕೀಯ ಓಟಕ್ಕೆ ತಡೆಯೊಡ್ಡಿತು. ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ಅವರ ವಿರುದ್ಧ ಮಂಜಣ್ಣ ಪರಾಜಯ ಅನುಭವಿಸಿಬೇಕಾಯಿತು.

ರಾಜಕೀಯ ಸ್ಥ್ಥಿತ್ಯಂತರದಲ್ಲಿ 1998 ರಲ್ಲಿ ಬಂಗಾರಪ್ಪ ವಿರುದ್ದವೇ ಲೋಕಸಭೆಗೆ ಸ್ಪರ್ಧಿಸಿ ಸುಮಾರು 1,59,000 ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದರು. 2004ರಲ್ಲಿ ಹಾಗೂ 2005 ರ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಉಪಚುನಾವಣೆಯಲ್ಲೂ ಸ್ಪರ್ಧಿಸಿದ್ದರು. 2009ರಲ್ಲಿ ನಡೆದ ವಿಧಾಬಸಭಾ ಚುನಾವಣೆಯಲ್ಲಿ ಭದ್ರಾವತಿ ಕ್ಷೇತ್ರದಿಂದ ಸ್ಪರ್ಧಿಗೆ ಕಾಂಗ್ರೆಸ್ ನ ಬಿ.ಕೆ. ಸಂಗಮೇಶ್ ಅವರು ವಿರುದ್ಧ ಪರಾಭವ ಹೊಂದಿದ್ದರೂ ಪಕ್ಷದ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು.

ಕಾರ್ಮಿಕ ನಾಯಕರಾಗಿಯೂ ದುಡಿಯುತ್ತಿರುವ ಮಂಜಣ್ಣ ಬೆಂಗಳೂರು ಟರ್ಫ್‌ಕ್ಲಬ್ ಎಂಪ್ಲಾಯ್ಸ್ ಆಸೋಸಿಯೇಷನ್ ಕಾಫಿ ಪ್ಲಾಂಟರ್ಸ್ ವರ್ಕರ್ಸ್ ಯೂನಿಯನ್, ಟ್ರಾಸ್ಸ್ ಮೋಟರ್ ವರ್ಕರ್ಸ್ ಯೂನಿಯನ್ ಹೀಗೆ ಹತ್ತು ಹಲವಾರು ಕಾರ್ಮಿಕ ಸಂಘಟನೆಗಳ ನೇತೃತ್ವ ವಹಿಸಿ ಕಾರ್ಮಿಕರ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ ನೆಕಾರರ ಸಂಘದ ರಾಜ್ಯಧ್ಯಕ್ಷರಾಗಿದ್ದರಲ್ಲದೆ ಶಿಕಾರಿಪುರದ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿಯಾಗಿ, ಜ್ಞಾನ ಜ್ಯೋತಿ ವಿದ್ಯಾ ಸಂಸ್ಥೆ, ನಿವೇದಿತಾ ವಿದ್ಯಾ ಟ್ರಸ್ಟ್, ಜನಶಕ್ತಿ ಪಬ್ಲಿಕ್ ಟ್ರಸ್ಟನ ಅಧ್ಯಕ್ಷರಾಗಿ ಶಿಕ್ಷಣ ಕೇತ್ರದಲ್ಲೂ ತಮ್ಮನ್ನೂ ತೊಡಗಿಸಿಕೊಂಡಿದ್ದಾರೆ.

ಹಿರಿಯರ ಬುದ್ದಿಜೀವಿಗಳ ಮನೆಯಿಂದೇ ಪ್ರತೀತಿಯಾಗಿರುವ ರಾಜ್ಯ ಸಭೆಯಲ್ಲಿ ಕರ್ನಾಟಕದ ಧ್ವನಿಯಾಗಿ ಮಂಜಣ್ಣ ಕಾರ್ಯನಿರ್ವಹಿಸಲೆಂಬುದೇ ಎಲ್ಲರ ಆಶಯವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X