ವಿಶ್ವಕಪ್ ಫುಟ್ ಬಾಲ್ ಟಿಕೆಟ್ಟುಗಳಿಗೆ ನೂಕುನುಗ್ಗಲು
ಜೋಹಾನ್ಸ್
ಬರ್ಗ್, ಮೇ. 28 : ಜೂನ್ ಎರಡನೇ ವಾರದಲ್ಲಿ ಆರಂಭವಾಗಲಿರುವ ಬಹುನಿರೀಕ್ಷಿತ ವಿಶ್ವಕಪ್ ಫುಟ್ ಬಾಲ್ ಪಂದ್ಯಾವಳಿಗಳ ಎಲ್ಲ ಪಂದ್ಯಗಳ ಟಿಕೆಟ್ ಗಳು ಎರಡನೇ ಬಾರಿಗೆ ಸೋಲ್ಡ್ ಔಟಾಗಿವೆ. ಫೈನಲ್ ಪಂದ್ಯದ ಟಿಕೆಟ್ ಗಳಿಗಂತೂ ಜನರು ನೂಕು ನುಗ್ಗಲು ಮೂಲಕ ಟಿಕೆಟ್ ಗಳು ಖಾಲಿಯಾಗಿವೆ. id="toptextpromo">ಜೂನ್
11ರಿಂದ ಆರಂಭವಾಗುವ ವಿಶ್ವಕಪ್ ಫುಟ್ ಬಾಲ್ ಪಂದ್ಯಾವಳಿಗಳಲ್ಲಿ 64 ಪಂದ್ಯಗಳು ನಡೆಯುತ್ತವೆ. ಈ ಪಂದ್ಯಗಳ ಟಿಕೆಟ್ ಗಳು ಈಗಾಗಲೇ ಮಾರಾಟವಾಗಿವೆ. ಆರಂಭಿಕ ಪಂದ್ಯ ಮತ್ತು ಫೈನಲ್ ಗಳ ಟಿಕೆಟ್ ಗಳ ಭಾರಿ ಬೇಡಿಕೆ ಮೂಲಕ ಮಾರಾಟವಾಗಿವೆ. ಉಳಿದಿದ್ದ 800 ಟಿಕೆಟ್ ಗಳು ಕ್ಷಣಮಾತ್ರದಲ್ಲಿ ಖರ್ಚಾಗಿವೆ ಎಂದು ದಕ್ಷಿಣ ಆಫ್ರಿಕಾದ ರೇಡಿಯೋ ವರದಿ ಮಾಡಿದೆ. id='are-slot-1' class='oiad oi-axt oiadv'> id='top-searched-articles'>ಫೈನಲ್
ಪಂದ್ಯದ ಟಿಕೆಟ್ ಗಾಗಿ ಫುಟ್ ಬಾಲ್ ಅಭಿಮಾನಿಗಳು ಕೊರೆಯುವ ಚಳಿಯಲ್ಲೂ ಅಹೋರಾತ್ರಿ ಟಿಕೆಟ್ ಕೌಂಟರ್ ಬಳಿ ನಿಂತು ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ ಎಂದು ಫೀಫಾ ಹೇಳಿದೆ. ಶುಕ್ರವಾರ ಬೆಳಗ್ಗೆ ಆರಂಭವಾದ ಉಳಿದ ಟಿಕೆಟ್ ಗಳ ಮಾರಾಟ ಕೆಲವೆ ಗಂಟೆಗಳಲ್ಲಿ 1.60 ಲಕ್ಷ ಟಿಕೆಟ್ ಗಳು ಸೋಲ್ಡ್ ಔಟಾಗಿವೆ. ದಕ್ಷಿಣಾ ಆಫ್ರಿಕಾ ವಿವಿಧ ಪ್ರಮುಖ ನಗರಗಳಲ್ಲಿ ಫೀಫಾ ಸ್ಥಾಪಿಸಿದ ಟಿಕೆಟ್ ಕೌಂಟರ್ ಗಳಲ್ಲಿ ಕೂಡಾ ಅಭಿಮಾನಿಗಳು ನೂಕು ನುಗ್ಗಲು ಮೂಲಕ ಟಿಕೆಟ್ ಪಡೆದುಕೊಂಡಿದ್ದಾರೆ ಎಂದು ಫೀಫಾ ವಿವರಿಸಿದೆ.











Click it and Unblock the Notifications