ರಾಥೋಡ್ ಗೆ ಬರೀ ಒಂದೂವರೆ ವರ್ಷ ಜೈಲು

ಸೆಷನ್ಸ್ ಕೋರ್ಟ್ ನ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ. ಆದರೆ, ಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಥೋಡ್ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಬಹುದು. ಆದರೆ, ಸೆಷನ್ಸ್ ಕೋರ್ಟ್ ಆದೇಶದ ಪ್ರತಿ ಕೈಗೆ ಬರುವವರೆಗೂ ರಾಥೊಡ್ ಜೈಲಿನಲ್ಲೇ ಕಾಲದೂಡಬೇಕು. ರುಚಿಕಾ ಗಿರ್ಹೋತ್ಸಾ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಲಯ ರಾಥೋಡ್ ಗೆ ಆರು ತಿಂಗಳ ಸಜೆ ನೀಡಿತ್ತು,
ವಿಡಿಯೋ: ಆರೋಪಿ ರಾಥೋಡ್ ಗೆ ಅಲ್ಪಪ್ರಮಾಣದ ಶಿಕ್ಷೆ
ವಿಡಿಯೋ: ನನ್ನ ಮಗಳ ಸಾವಿಗೆ ರಾಥೋಡ್ ಕಾರಣ
ಈ ಆದೇಶದ ವಿರುದ್ಧ ರಾಥೋಡ್ ಸೆಷನ್ಸ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. 90ರ ದಶಕದಲ್ಲಿ 14ರ ಹರೆಯದ ರುಚಿಕಾಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ರಾಥೋಡ್ ಮೇಲೆ ಹೊರಿಸಲಾಗಿದ್ದು, ಆಕೆ ಮೂರು ವರ್ಷದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಳು.












Click it and Unblock the Notifications