ಅಮೆರಿಕದಲ್ಲಿ 5 ತಿಂಗಳಲ್ಲಿ 73 ಬ್ಯಾಂಕು ದಿವಾಳಿ
ನ್ಯೂಯಾರ್ಕ್,
ಮೇ. 24: ತೀವ್ರ ಆರ್ಥಿಕ ಹಿಂಜರಿತಕ್ಕೆ ತುತ್ತಾಗಿ ಇದೀಗ ಚೇತರಿಕೆ ಕಾಣುತ್ತಿರುವ ಅಮೇರಿಕಾದಲ್ಲಿ ಬ್ಯಾಂಕ್ ಗಳ ದಿವಾಳಿತನ ಇನ್ನೂ ನಿಂತಿಲ್ಲ. ಸರಾಸರಿ ತಿಂಗಳಿಗೆ 14 ಬ್ಯಾಂಕುಗಳು ಇಲ್ಲಿ ಬಾಗಿಲು ಮುಚ್ಚುತ್ತಿವೆ. ಅಮೆರಿಕಾದಲ್ಲಿ ಈ ತನಕ ಒಟ್ಟು 775 ಬ್ಯಾಂಕ್ ಗಳು ಬಾಗಿಲು ಮುಚ್ಚಿವೆ. id="toptextpromo">ಮುಂದಿನ
ದಿನಗಳಲ್ಲಿ ಇನ್ನೂ ಹೆಚ್ಚು ಬ್ಯಾಂಕ್ ಗಳು ಮುಚ್ಚಲಿವೆ ಎಂದು ಫೆಡರಲ್ ಡಿಪಾಸಿಟ್ ಇನ್ಸೂರೆನ್ಸ್ ಕಾರ್ಪೊರೇಷನ್ ಎಚ್ಚರಿಸಿದೆ. ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ ಸುಮಾರು 73 ಸಣ್ಣ ಮತ್ತು ಮದ್ಯಮ ದರ್ಜೆಯ ಬ್ಯಾಂಕ್ ಗಳು ಮುಚ್ಚಲ್ಪಟ್ಟಿವೆ. ಈ ಮೇ ತಿಂಗಳಿನಲ್ಲಿ ಈ ತನಕ 9 ಬ್ಯಾಂಕ್ ಗಳು ಮುಚ್ಚಲ್ಪಟ್ಟಿದ್ದು ಸುಮಾರು 8000 ಬ್ಯಾಂಕ್ ಗಳ ಠೇವಣಿಗಳಿಗೆ ವಿಮಾ ರಕ್ಷೆ ಒದಗಿಸಿರುವ ಫೆಡರಲ್ ಇನ್ಸೂರೆನ್ಸ್ ಕಾರ್ಪೊರೇಷನ್ ಗೆ 521 ಮಿಲಿಯನ್ ಡಾಲರ್ ಗಳಷ್ಟು ಹೊರೆ ಬಿದ್ದಿದೆ. id='are-slot-1' class='oiad oi-axt oiadv'> id='top-searched-articles'>ಕಾರ್ಪೊರೇಷನ್
ಪ್ರಕಾರ ಕಳೆದ ಏಪ್ರಿಲ್ ನಲ್ಲಿ ಅತ್ಯಧಿಕ ಅಂದರೆ ಸುಮಾರು 23 ಬ್ಯಾಂಕ್ ಗಳು ಮುಚ್ಚಿದ್ದು, ಈ ವರ್ಷದ ಮೊದಲ ಮೂರು ತಿಂಗಳಿನಲ್ಲಿ 41 ಬ್ಯಾಂಕ್ ಗಳು ಮುಚ್ಚಿವೆ. ಅಮೇರಿಕಾದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಬ್ಯಾಂಕ್ ಗಳಿಗೆ ಬರಬೇಕಾದ ಸಾಲದ ಬಾಕಿಗೆ ತೀವ್ರ ಹಿನ್ನಡೆಯಾಗಿದ್ದು ಸಣ್ಣ ಮತ್ತು ಮಧ್ಯಮ ದರ್ಜೆಯ ಬ್ಯಾಂಕ್ ಗಳಿಗೆ ತೊಂದರೆ ಆಗಿದೆ. ಬ್ಯಾಂಕಿಂಗ್ ಉದ್ಯಮ ಇನ್ನೂ ಹೆಚ್ಚು ಏರಿಳಿತಗಳನ್ನು ಕಾಣಲಿದ್ದು ಹೆಚ್ಚಿನ ಬ್ಯಾಂಕ್ ವಿಫಲತೆ ಆಗಲಿರುವುದಾಗಿ ಇನ್ಸೂರೆನ್ಸ್ ಕಾರ್ಪೊರೇಷನ್ ನ ಅಧ್ಯಕ್ಷೆ ಶೀಲಾ ಸಿ ಬೈರ್ ತಿಳಿಸಿದ್ದಾರೆ.











Click it and Unblock the Notifications