ನಾನಿಲ್ಲದಿದ್ದರೂ ಜರ್ಮನಿ ಬಲಿಷ್ಠ : ಬಲಾಕ್
1999 ರಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್ ರಂಗಕ್ಕೆ ಇಳಿದ ಬಲಾಕ್ 3 ನೇ ಬಾರಿ ವಿಶ್ವಕಪ್ ಫುಟ್ಬಾಲ್‌ನಲ್ಲಿ ಜರ್ಮನಿಯನ್ನು ಪ್ರತಿನಿಧಿಸಬೇಕಾಗಿತ್ತು. 33 ವರ್ಷದ ಬಲಾಕ್, ಶನಿವಾರ ಚೆಲ್ಸಿಯಾ ಕ್ಲಬ್ ಪರ ಆಡುತ್ತಿರುವ ವೇಳೆ ಹಿಮ್ಮಡಿ ನೋವಿಗೊಳಗಾಗಿದ್ದರು.
ಫೀಫಾ ವಿಶ್ವಕಪ್ 2010 : ವಿಶ್ವಕಪ್ ವೇಳಾಪಟ್ಟಿ || ಯಾವ ಗುಂಪಿನಲ್ಲಿ ಯಾವ ತಂಡ || ಅಂಕಗಳ ಪಟ್ಟಿ
ಇದರಿಂದ ಆತ ಮುಂದಿನ 8 ವಾರಗಳ ಕಾಲ ತಂಡದಿಂದ ಹೊರಗಿರಬೇಕಿದೆ. ತಂಡದ ನಾಯಕನೋರ್ವ ಮಹತ್ವದ ಟೂರ್ನಿಯಲ್ಲಿಯೇ ತಂಡದಿಂದ ಬೇರ್ಪಡುವುದು ಯಾವುದೇ ತಂಡಕ್ಕೂ ಆಘಾತ ತರುವಂತದ್ದೇ. ಜೊತೆಗೆ ಯುವಕರ ತಂಡಕ್ಕೆ ನಾನು ಅತ್ಯಂತ ಅನುಭವಿ ಆಟಗಾರನಾಗಿದ್ದೆ.
ವಿಡಿಯೋಗಳು : ವಿಶ್ವಕಪ್ ಆಶಯ ಗೀತೆ || ಗಾಯಕಿ ಶಕೀರಾ ಗೀತೆ || ಎಕಾನ್ ಆಫ್ರಿಕಾ ಗೀತೆ
ಆದರೆ ಇನ್ನೊಂದು ದೃಷ್ಟಿಕೋನದಲ್ಲಿ ನೋಡಿದರೆ ನನ್ನ ಅನುಪಸ್ಥಿತಿಯಿಂದ ತಂಡದಲ್ಲಿನ ಯುವಕರಿಗೆ ತಮ್ಮ ಸಾಮರ್ಥ್ಯವನ್ನು ಒರೆಗೆ ಹೆಚ್ಚಲು ಹೆಚ್ಚು ಅನುಕೂಲವಾಗಲಿದೆ. ಪ್ರತಿಯೊಬ್ಬ ಆಟಗಾರನೂ ವೈಯಕ್ತಿಕವಾಗಿ ತಮ್ಮ ಜವಾಬ್ದಾರಿಯ ಬಗ್ಗೆ ಅರಿತುಕೊಳ್ಳಬಹುದು ಎಂದರು. ವಿಶ್ರಾಂತಿ ನಂತರ ಮತ್ತೆ ಅಂತಾರಾಷ್ಟ್ರೀಯ ರಂಗಕ್ಕೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ ಬಲಾಕ್, ಜರ್ಮನಿ ತಂಡಕ್ಕೆ ಶುಭ ಹಾರೈಸಿದ್ದಾರೆ.













Click it and Unblock the Notifications