ಮಿಸೆಸ್ ಕರ್ನಾಟಕ-2010 ಮುನ್ನೋಟ

Tina and Tara Anuradha
ಬೆಕ್ಕಿನ ನಡಿಗೆ ಇಟ್ಟು ರ‌್ಯಾಂಪ್ ಮೇಲೆ ನಡೆಯುವ ಅವಕಾಶ ಯುವತಿಯರಿಗೆ ಮಾತ್ರ ಏಕೆ ಮೀಸಲಾಗಿರಬೇಕು. ಗೃಹಿಣಿಯಾದರೂ ಅಂದದ ಮೈಕಟ್ಟುಳ್ಳ, ಆತ್ಮವಿಶ್ವಾಸವುಳ್ಳ ಲಲನೆಯರಿಗೂ ಕೂಡ ಫ್ಯಾಷನ್ ಷೋಗಳೂ ಹೆಚ್ಚಾಗಬೇಕು ಎಂಬುದು ನಮ್ಮ ಸಂಸ್ಥೆ ಉದ್ದೇಶ ಎಂದು ನಗರದ ಕ್ಲೌಡ್ 9 ಸಂಸ್ಥೆ ಹೇಳಿದೆ. ಮೇ 30ರಂದು ಆರಂಭವಾಗಲಿರುವ ಮಿಸೆಸ್ ಕರ್ನಾಟಕ 2010 ಸೌಂದರ್ಯ ಸ್ಪರ್ಧೆಗೆ ಅರ್ಜಿ ನಮೂನೆಯನ್ನು ರ್ಧೆಗೆ ಸೋಮವಾರ ನಟಿ ತಾರಾ ಅನುರಾಧಾ ಹಾಗೂ ಟೀನಾ ಪೊನ್ನಪ್ಪ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ತಾರಾ, ಯುವತಿಯರಿಗೆ ಮಾತ್ರ ಸೀಮಿತವಾಗಿದ್ದ ಸ್ಪರ್ಧೆಯಲ್ಲಿ ಗೃಹಿಣಿಯರಿಗೂ ಅವಕಾಶ ಕಲ್ಪಿಸಿರುವುದು ಉತ್ತಮ ಬೆಳವಣಿಗೆ. ಹೆಣ್ಣಿನ ವಯಸ್ಸಿಗೆ ತಕ್ಕಂತೆ ಆಕೆಯ ರೂಪ ಬದಲಾಗುತ್ತದೆ. ಅದಕ್ಕೆ ತಕ್ಕಂತೆ ಸ್ಪರ್ಧೆಗಳನ್ನು ಏರ್ಪಡಿಸಬೇಕಾಗುತ್ತದೆ. ಸಂಸಾರದ ಕಣ್ಣಾಗಿ ಒಪ್ಪ ಓರಣದಿಂದ ಮನೆಯ ಸ್ವಾಸ್ಥ್ಯ ಕಾಪಾಡುವ ಗೃಹಿಣಿಯರು ರ‌್ಯಾಂಪ್ ಮೇಲೆ ಕೂಡ ತಮ್ಮ ಝಲಕ್ ತೋರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಟೀನಾ ಪೊನ್ನಪ್ಪ,ಮಾತನಾಡಿ, ವಿವಾಹದ ನಂತರ ಬದುಕೇ ಕೊನೆಗೊಂಡಿತು ಎಂದು ಭಾವಿಸುವ ಮಹಿಳೆಯರಿಗೆ ತಮ್ಮನ್ನು ಗುರುತಿಸಿಕೊಳ್ಳಲು ವೇದಿಕೆ ಕಲ್ಪಿಸಿದ್ದು ಶ್ಲಾಘನೀಯ. ಅದರಲ್ಲೂ ಸ್ಪರ್ಧಿಗಳು ಸೀರೆಯಲ್ಲಿ ಭಾಗವಹಿಸಬೇಕು ಎಂಬ ನಿಯಮ ನಮ್ಮ ಸಂಸ್ಕೃತಿಗೆ ಮಾದರಿಯಾಗಿದೆ ಎಂದು ಸಂತಸದಿಂದ ಹೇಳಿದರು.

21ರಿಂದ 35 ವರ್ಷದೊಳಗಿನ ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ನಗರದ ಕಲ್ಯಾಣನಗರದ ಹೆಚ್‌ಆರ್‌ಬಿಆರ್ ಲೇಔಟ್‌ನಲ್ಲಿರುವ ಇಂಡೋ ಏಷಿಯನ್ ಗ್ರೂಪ್ ಆಫ್ ಇನ್ಸ್‌ಟಿಟ್ಯೂಟ್‌ನಲ್ಲಿ ನಡೆಯಲಿದೆ. ಚಂದನಾ ನಾಗರಾಜ್ ಎಂಬುವವರು ಪ್ರಪ್ರಥಮವಾಗಿ ಅರ್ಜಿ ಸ್ವೀಕರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ http://www.mrskarnataka.com ಅಥವಾ 9972877212,( 080)41328140 ಸಂಖ್ಯೆಯನ್ನು ಸಂಪರ್ಕಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+