ಅನಂತಕುಮಾರ್ ಹೆಗಲಿಗೆ ಬಿಹಾರ ಉಸ್ತುವಾರಿ
ನವದೆಹಲಿ,
ಮೇ.18: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನಂತ್ ಕುಮಾರ್ ಅವರನ್ನು ಬಿಹಾರದಲ್ಲಿ ನಡೆಯಲಿರುವ ಚುನಾವಣೆ ಉಸ್ತುವಾರಿ ನೋಡಿಕೊಳ್ಳಲು ನೇಮಿಸಲಾಗಿದೆ. id="toptextpromo">ಮಾಜಿ
ಸಂಸದ ಧರ್ಮೇಂದ್ರ ಪ್ರಧಾನ್ ಅವರನ್ನು ಅನಂತ್ ಕುಮಾರ್ ಅವರ ಸಹಾಯಕರಾಗಿ ನಿಯುಕ್ತಿಗೊಳಿಸಲಾಗಿದೆ ಎಂದು ಪಕ್ಷದ ಪ್ರಕಟಣೆಯಲ್ಲಿ ಹೇಳಲಾಗಿದೆ. ಕಳೆದ ತಿಂಗಳು ಮಾಜಿ ಸಚಿವ ಸಿಪಿ ಠಾಕೂರ್ ಅವರನ್ನು ಬಿಹಾರದ ಬಿಜೆಪಿ ಮುಖ್ಯಸ್ಥರಾಗಿ ನೇಮಿಸಲಾಗಿತ್ತು. ಬಿಹಾರದಲ್ಲಿ ಜೆಡಿಯು ಮುಖಂಡ ನಿತೀಶ್ ಕುಮಾರ್ ಅವರ ನೇತೃತ್ವದ ಸರ್ಕಾರ ಆಡಳಿತ ನಡೆಸುತ್ತಿದೆ. id='are-slot-1' class='oiad oi-axt oiadv'> id='top-searched-articles'>ಮುಂಬರುವ
ಅಕ್ಟೋಬರ್ ನಲ್ಲಿ ಅಸೆಂಬ್ಲಿ ಚುನಾವಣೆಗೆ ಬಿಹಾರ ಈಗಲೇ ಸಜ್ಜುಗೊಳ್ಳುತ್ತಿದೆ. ಚುನಾವಣೆ ಸಮಯದಲ್ಲಿ ನಮ್ಮದು ಎಲ್ಲವೂ ಪ್ರಥಮ ಎನ್ನುವ ಬಿಜೆಪಿ, ಈ ಬಾರಿ ಕೂಡ, ಸರ್ವಸನ್ನದ್ಧವಾಗಿ ಕಣಕ್ಕಿಳಿಯುತ್ತಿದೆ. ಅಭ್ಯರ್ಥಿಗಳ ಆಯ್ಕೆ, ಕ್ಷೇತ್ರವಾರು ಸಮೀಕ್ಷೆ, ಪ್ರಚಾರ ತಂತ್ರ ಮುಂತಾದ ಗುರುತರ ಕೆಲಸ ಹಿರಿಯ ನಾಯಕ ಅನಂತ್ ಅವರ ಮೇಲಿದ್ದು, ಗೆಲುವು ಸಾಧಿಸುವುದು ಸವಾಲಾಗಿದೆ.











Click it and Unblock the Notifications