ಡಿಎನ್ಎ ಪರೀಕ್ಷೆಗೆ ಉಹುಂ ಅಂದ ಹಾಲಪ್ಪ
ಬೆಂಗಳೂರು,
ಮೇ. 17 : ಅತ್ಯಾಚಾರ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಡಿಎನ್ಎ ಪರೀಕ್ಷೆ ನಿರಾಕರಿಸಿ ಶಿವಮೂಗ್ಗದ ಜೆಎಂಎಫ್ ಸಿ ನ್ಯಾಯಾಲಯದ ತಕರಾರು ಅರ್ಜಿ ಸಲ್ಲಿಸಿದ್ದಾರೆ. id="toptextpromo">ನಗರದ
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಾಲಪ್ಪ ಅವರ ಡಿಎನ್ಎ ಪರೀಕ್ಷೆ ನಡೆಸಿ ಅತ್ಯಾಚಾರ ಆರೋಪ ಪ್ರಕರಣದ ಸಾಕ್ಷ್ಯವಾಗಿ ಪರಿಗಣಿಸಲು ಸಿಐಡಿ ಪೊಲೀಸರು ಮುಂದಾಗಿದ್ದಾರೆ. ಆದರೆ, ಡಿಎನ್ಎ ಪರೀಕ್ಷೆಗೆ ಹಾಲಪ್ಪ ಸುತಾರಾಂ ಒಪ್ಪುತ್ತಿಲ್ಲ. ಅವರ ಆಕ್ಷೇಪದ ನಡುವೆಯೂ ತನಿಖೆ ಉದ್ದೇಶದಿಂದ ಡಿಎನ್ಎ ಪರೀಕ್ಷೆ ಒಳಪಡಿಸುವ ಸಾಧ್ಯತೆ ಇದ್ದು, ಇದನ್ನು ತಡೆಯಲು ಹಾಲಪ್ಪ ಪರ ವಕೀಲ ಅಶೋಕ್ ಭಟ್ ಸೋಮವಾರ ಶಿವಮೂಗ್ಗ 2ನೇ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈಗಾಗಲೇ
ರಕ್ತ ಪರೀಕ್ಷೆ ನಡೆಸದಂತೆ ಕೋರಿ ಹಾಲಪ್ಪ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ವಿಚಾರಣೆಯನ್ನು ಮೇ 18 ಕ್ಕೆ ಮುಂದೂಡಿದೆ. ಇದೀಗ ಡಿಎನ್ಎ ಪರೀಕ್ಷೆಗೂ ತಕರಾರು ತೆಗೆದು ಹಾಲಪ್ಪ ಪರ ವಕೀಲರು ಕೋರ್ಟ್ ಮೊರೆ ಹೋಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಹಾಲಪ್ಪ ಅವರು ಸ್ನೇಹಿತನ ಪತ್ನಿಯನ್ನು ಅತ್ಯಾಚಾರ ಮಾಡಿರುವ ಪ್ರಕರಣ ಎದುರಿಸುತ್ತಿದ್ದಾರೆ.











Click it and Unblock the Notifications