ಟಿ20: ಆಂಗ್ಲರ ಮಡಿಲಿಗೆ ವಿಶ್ವಕಪ್

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ಆರಂಭಿಕ ಕುಸಿತಕ್ಕೆ ಒಳಗಾಗಿ ಆರು ವಿಕೆಟ್ ಕಳೆದುಕೊಂಡು 147 ರನ್ ಗಳಿಸಿತು. ತಂಡದ ಮೊತ್ತ 8 ರನ್ ಗಳಾಗುವಷ್ಟರಲ್ಲಿ ಮೂರು ಅಗ್ರಮಾನ್ಯ ಬ್ಯಾಟ್ಸ್ ಮ್ಯಾನ್ ಗಳು ಪೆವಿಲಿಯನ್ ಸೇರಿಕೊಂಡಿದ್ದರು. ನಾಲ್ಕನೇ ವಿಕೆಟ್ ಗೆ ನಾಯಕ ಮೈಕಲ್ ಕ್ಲಾರ್ಕ್ ಮತ್ತು ಡೇವಿಡ್ ಹಸ್ಸಿ 37 ರನ್ ಕಲೆ ಹಾಕಿದರು. ನಂತರ ಹಸ್ಸಿ ಮತ್ತು ಕೆಮರೂನ್ ವೈಟ್ ಐದನೇ ವಿಕೆಟ್ ಗೆ 50 ರನ್ ಗಳ ಜೊತೆಯಾಟ ನೀಡಿದರು. ಆಸ್ಟ್ರೇಲಿಯಾ ಪರ ಕ್ಲಾರ್ಕ್ 27 , ಡೇವಿಡ್ ಹಸ್ಸಿ 59 , ವೈಟ್ 30 ರನ್ ಹೊಡೆದರು.
ವಿಡಿಯೋ: ಆಂಗ್ಲರ ಶತಮಾನದ ಕನಸು ನನಸು
ಗೆಲ್ಲಲು 148 ರನ್ ಗಳ ಗುರಿ ಪಡೆದಿದ್ದ ಇಂಗ್ಲೆಂಡ್ 17 ಓವರ್ ಗಳಲ್ಲಿ ಕೇವಲ ಮೂರು ವಿಕೆಟ್ ಕಳೆದುಕೊಂಡು 148 ರನ್ ಗಳಿಸಿ ಭರ್ಜರಿ ವಿಜಯೋತ್ಸವ ಆಚರಿಸಿತು. ಕ್ರೆಗ್ ಕೀಸ್ ವೆಟ್ಟಾರ್ ಮತ್ತು ಕೆವಿನ್ ಪೀಟರ್ಸನ್ ಎರಡನೇ ವಿಕೆಟ್ ಗೆ 68 ಎಸೆತಗಳಲ್ಲಿ 111 ರನ್ ಕಲೆ ಹಾಕುವ ಮೂಲಕ ತಂಡವನ್ನು ನಿರಾಯಾಸ ಗೆಲುವಿನತ್ತ ಮುಖ ಮಾಡಿ ನಿಲ್ಲಿಸಿದರು. ತಂಡದ ಪರ ವೆಟ್ಟಾರ್ 63 ಮತ್ತು ಪೀಟರ್ಸನ್ 47 ರನ್ ಗಳಿಸಿದರು. ಏಕದಿನ ಕ್ರಿಕೆಟ್ ನಲ್ಲಿ ಮೂರು ಬಾರಿ ಫೈನಲ್ ಪ್ರವೇಶಿಸಿದ್ದರೂ ಪ್ರಶಸ್ತಿ ಪಡೆಯುವಲ್ಲಿ ಎಡವಿದ್ದ ಇಂಗ್ಲೆಂಡ್ ಗೆ ಈ ಜಯ ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.
ಪಂದ್ಯಪುರುಷ: ಕ್ರೆಗ್ ಕೀಸ್ ವೆಟ್ಟಾರ್
ಸರಣಿಶ್ರೇಷ್ಠ : ಕೆವಿನ್ ಪೀಟರ್ಸನ್












Click it and Unblock the Notifications