ಮಡಿಕೇರಿ : ಅತ್ಯಾಚಾರವೆಸಗಿದ ಅಪ್ರಾಪ್ತರ ಬಂಧನ

ರವೀಂದ್ರ (17), ರವಿ (16), ಮಣಿ (17) ಮತ್ತು ಮನು (19) ವಿರಾಜಪೇಟೆ ತಾಲೂಕಿನ ತೋರಾ ಗ್ರಾಮದಲ್ಲಿ ಮೂವರು ಯುವತಿಯರ ಮೇಲೆ ಏಪ್ರಿಲ್ 29ರಂದು ಅತ್ಯಾಚಾರವೆಸಗಿದ್ದರು.
ಅಪ್ರಾಪ್ತರನ್ನು ಮೈಸೂರಿನಲ್ಲಿನ ಬಾಲಾಪರಾಧ ನ್ಯಾಯಾಲಯದ ಮುಂದೆ ಇಂದು ಹಾಜರುಪಡಿಸಲಾಯಿತು. ಇನ್ನೊಬ್ಬನನ್ನು ವಿರಾಜಪೇಟೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನಾಲ್ವರನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಏಪ್ರಿಲ್ 29ರಂದು ತೋರಾ ಗ್ರಾಮದ ಮೂವರು ಯುವತಿಯರು ಏಕಾಏಕಿ ಕಾಣೆಯಾಗಿದ್ದರು. ಮೂವರು ಸ್ಥಳೀಯ ಎಸ್ಟೇಟಿನಲ್ಲಿ ಕೆಲಸ ಮಾಡುತ್ತಿದ್ದರು. ಕಾಣೆಯಾಗಿದ್ದರ ಬಗ್ಗೆ ವಿಚಾರಿಸಲಾಗಿ ಸಬ್ ಇನ್ ಸ್ಪೆಕ್ಟರ್ ಎದುರಿಗೆ ತಮ್ಮ ಮೇಲೆ ಆರೋಪಿಗಳು ಅತ್ಯಾಚಾರ ಎಸಗಿದ್ದ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಹತ್ತಿರದ ಕಾಡಿಗೆ ಅವರನ್ನು ಕರೆದೊಯ್ದು ಬಲಾತ್ಕಾರ ಮಾಡಿದ್ದನ್ನು ಅವರು ಪೊಲೀಸರೆದಿರು ಒಪ್ಪಿಕೊಂಡಿದ್ದರು. ಯುವತಿರು ನೀಡಿದ ಮಾಹಿತಿಯ ಮೇರೆಗೆ ಆರೋಪಿಗಳನ್ನು ಬಂಧಿಸಲಾಯಿತು.












Click it and Unblock the Notifications