ಮೈಸೂರು ದೃಶ್ಯಕಲಾ ಶಾಲೆಗೆ ಅರ್ಜಿ ಆಹ್ವಾನ
ಮೈಸೂರು,
ಮೇ. 13: ಮೈಸೂರಿನಲ್ಲಿರುವ ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿಯಲ್ಲಿ ಪ್ರಥಮ ಮೂಲ ತರಗತಿ ಪ್ರವೇಶಕ್ಕಾಗಿ 2010-11 ಸಾಲಿನ ಶೈಕ್ಷಣಿಕ ವರ್ಷಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. id="toptextpromo">ಕನಿಷ್ಠ
ವಿದ್ಯಾರ್ಹತೆಯ ಪ್ರಥಮ ಮೂಲ ತರಗತಿಗೆ ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಪ್ರವೇಶದ ಬಗ್ಗೆ ಅರ್ಜಿ ಮತ್ತು ವಿವರಣ ಪತ್ರಿಕೆಯನ್ನು ರೂ.125 ಪಾವತಿಸಿ ಖುದ್ದಾಗಿ ಅಥವಾ ರೂ.150 ಡಿ.ಡಿ.ಯನ್ನು ಡೀನ್, ಕಾವಾ, ಮೈಸೂರು ಇವರ ಹೆಸರಿನಲ್ಲಿ ಪಡೆದು ಅಂಚೆ ಮೂಲಕ ಕಳುಹಿಸಿ ಪಡೆಯಬಹುದು. id='are-slot-1' class='oiad oi-axt oiadv'> id='top-searched-articles'>ಪ್ರಥಮ
ಮೂಲ ತರಗತಿಗೆ ಅರ್ಜಿ ಹಾಕಲು ಮೇ 29 ಶನಿವಾರ ಅಂತಿಮ ದಿನವಾಗಿದೆ. ಅರ್ಹತಾ ಪರೀಕ್ಷೆಯು ಜೂನ್ 3ರಂದು ಗುರುವಾರ ಬೆಳಿಗ್ಗೆ 11 ಗಂಟೆಗೆ ಹಾಗೂ ಮಧ್ಯಾಹ್ನ 2 ಗಂಟೆಗೆ ವೈಯುಕ್ತಿಕ ಸಂದರ್ಶನವು ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ಸಿಐಟಿ ಕಟ್ಟಡದಲ್ಲಿ ನಡೆಯಲಿದೆ. ಗರಿಷ್ಠ ವಯೋಮಿತಿ 22 ವರ್ಷ. ಆಯ್ಕೆಯಾದವರು ಜೂನ್ 5ರೊಳಗೆ ಶುಲ್ಕ ಪಾವತಿಸಬೇಕು. ತರಗತಿಗಳು ಜೂನ್ 7ರಿಂದ ಪ್ರಾರಂಭವಾಗಲಿವೆ ಎಂದು ಕಾವಾ ಡೀನ್ ತಿಳಿಸಿದ್ದಾರೆ.











Click it and Unblock the Notifications