ಉದ್ಯೋಗಸ್ಥ ಮುಸ್ಲಿಂ ಮಹಿಳೆಯರ ವಿರುದ್ಧ ಫತ್ವಾ
ಲಖನೌ,
ಮೇ. 12 : ಪುರುಷರ ಜೊತೆಗೆ ಕೆಲಸ ಮಾಡುವುದು ಇಸ್ಲಾಂ ಧರ್ಮಕ್ಕೆ ವಿರೋಧವಾದುದು. ನೌಕರಿಯಲ್ಲಿರುವ ಮಹಿಳೆಯರು ಪುರುಷ ಉದ್ಯೋಗಿಗಳು ಜೊತೆಗೆ ಮಾತನಾಡಕೂಡದು. ಮಹಿಳೆಯರನ್ನು ಕೆಲಸಕ್ಕೆ ಕಳಿಸುವ ಕುಟುಂಬಗಳ ವಿರುದ್ದ ದಾರುಲ್ ಉಲೂಮ್ ಸಂಘಟನೆ ಫತ್ವಾ ಹೊರಡಿಸಿದೆ. id="toptextpromo">ಸರಕಾರಿ
ಅಥವಾ ಖಾಸಗಿ ಸಂಸ್ಥೆಗಳಲ್ಲಿ ಮುಸ್ಲಿಂ ಮಹಿಳೆಯರು ನೌಕರಿ ಮಾಡುವುದು ಮತ್ತು ಸಹಉದ್ಯೋಗಿ ಪುರುಷರ ಜೊತೆಗೆ ಬುರ್ಖಾ ರಹಿತವಾಗಿ ಮಾತನಾಡಬಾರದು. ಇದು ಇಸ್ಲಾಂ ಧರ್ಮಕ್ಕೆ ವಿರುದ್ಧ ಕೆಲಸ. ಮಹಿಳೆಯರನ್ನು ಕೆಲಸಕ್ಕೆ ಕಳುಹಿಸುವವರ ವಿರುದ್ಧ ಫತ್ವಾ ಹೊರಡಿಸುವುದಾಗಿ ಮೌಲ್ವಿ ಮೌಲಾನಾ ಅಬುಲ್ ಇರ್ಪಾನ್ ಎಚ್ಚರಿಕೆ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಔದ್ಯೋಗಿಕ
ಜೀವನ ನಡೆಸಲು ಇಚ್ಚಿಸುವ ಮುಸ್ಲಿಂ ಮಹಿಳೆಯರು ಅದರಲ್ಲಿ ಯಶಸ್ಸು ಗಳಿಸಬಹುದು. ಸಾಕಷ್ಟು ಎತ್ತರಕ್ಕೆ ಬೆಳೆಯಬಹುದು. ಆದರೆ, ಮರಣಾನಂತರ ಇದಕ್ಕೆ ಅವರು ಉತ್ತರ ನೀಡಬೇಕಾಗುತ್ತದೆ ಎಂದು ಮೌಲ್ವಿ ವಿವರಿಸಿದ್ದಾರೆ. ಆದರೆ, ಫತ್ವಾಕ್ಕೆ ಮುಸ್ಲಿಂ ಮಹಿಳೆಯರು ವಿರೋಧ ವ್ಯಕ್ತಪಡಿಸಿದ್ದು, ಅದಕ್ಕೆ ಹೆಚ್ಚೇನೂ ತಲೆ ಕೆಡಿಸಿಕೊಳ್ಳಬೇಕಿಲ್ಲ ಎಂದು ಮುಸ್ಲಿಂ ಫ್ಯಾಶನ್ ಡಿಸೈನರ್ ಒಬ್ಬರು ಹೇಳಿದ್ದಾರೆ.











Click it and Unblock the Notifications