ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಲ್ಸೇತುವೆ ಆಯ್ತು ಈಗ ಸುರಂಗ ರಸ್ತೆಗಳು

By Mahesh
|
Google Oneindia Kannada News

 Tunnels to ease bangalore traffic congestion
ಬೆಂಗಳೂರು, ಮೇ.10: ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುವ ಹಾಗೂ ರಸ್ತೆಗಳು ಕಿರಿದಾಗಿರುವ ಕಡೆ ಸುರಂಗರಸ್ತೆ ನಿರ್ಮಿಸುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ. ಅವೆನ್ಯೂ ರಸ್ತೆ ಹಾಗೂ ರಾಜಾಜಿನಗರದಿಂದ ಮೆಜೆಸ್ಟಿಕ್‌ವರೆಗೆ ಸುರಂಗರಸ್ತೆ ನಿರ್ಮಿಸುವ ಪ್ರಸ್ತಾವನೆ ಎಂದು ಸಾರಿಗೆ ಸಚಿವ ಆರ್. ಅಶೋಕ್ ಹೇಳಿದರು.

ಸೋಮವಾರ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಚಾರದ ಒತ್ತಡ ಕಡಿಮೆ ಮಾಡುವ ಬಗ್ಗೆ ಚರ್ಚಿಸಲಾಯಿತು. ಸಂಚಾರ ದಟ್ಟಣೆ ನೀಗಿಸುವ ಹಿನ್ನೆಲೆಯಲ್ಲಿ ಐದು ಪ್ರಮುಖ ರಸ್ತೆಗಳ ವಿಸ್ತರಣೆ ಮಾಡುವುದು. ಈ ಕಾಮಗಾರಿಯನ್ನೂ ಬಿಡಿಎಗೆ ವಹಿಸಲು ನಿರ್ಧರಿಸಲಾಯಿತು ಎಂದು ಅಶೋಕ್ ಸುದ್ದಿಗಾರರಿಗೆ ತಿಳಿಸಿದರು.

ಗ್ಯಾಲರಿ:ದಲಿತರ ಮನವಿ ಆಲಿಸುತ್ತಿರುವ ಬಿಎಸ್ ವೈ

ಗ್ಯಾಲರಿ:ಸಿದ್ದಗಂಗಾ ಶ್ರೀಗಳ ಆಶೀರ್ವಾದ ಬೇಡಿದ ಸಿಎಂ
ನಗರದಲ್ಲಿ ಒಂದು ಮೇಲುರಸ್ತೆ ನಿರ್ಮಿಸಲು 45-50 ಕೋಟಿ ರು.ವೆಚ್ಚವಾಗುತ್ತದೆ. ಅದರ ಬದಲಿಗೆ ಸುರಂಗರಸ್ತೆ ನಿರ್ಮಿಸುವುದೇ ಒಳ್ಳೆಯದು. ಸುರಂಗ ಮಾರ್ಗದ ರಸ್ತೆ ನಿರ್ಮಿಸಲು ಒಂದು ಕಿ.ಮೀಗೆ 160 ಕೋಟಿ ರು. ವೆಚ್ಚವಾಗುತ್ತದೆ ಎಂದು ಅಂದಾಜು ಮಾಡಲಾಗಿದೆ ಎಂದರು.

ಮೊದಲ ಹಂತದಲ್ಲಿ ಪದ್ಮನಾಭನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಜೆಪಿ ನಗರದ ಕನಕಪುರ ರಸ್ತೆಯಲ್ಲಿ ಅಂಡರ್‌ಪಾಸ್ ನಿರ್ಮಾಣವಾಗಲಿದೆ. ಒಟ್ಟು ಐದು ಕಡೆಗಳಲ್ಲಿ ಅಂಡರ್‌ಪಾಸ್ ಹಾಗೂ ಮೇಲುರಸ್ತೆ ಕಾಮಗಾರಿಯನ್ನು ಬಿಡಿಎ ವತಿಯಿಂದ ಕೈಗೆತ್ತಿಕೊಳ್ಳಲಾಗುವುದು ಎಂದು ಸಾರಿಗೆ ಸಚಿವರು ಹೇಳಿದರು.

ಬಿಡಿಎಗೆ ಕಾಮಗಾರಿ ವಹಿಸುವ ಬಗ್ಗೆ ಬಿಬಿಎಂಪಿಯ ಮುಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು. ಇದಲ್ಲದೆ, ಬಿಬಿಎಂಪಿ ಸಹ ಸಿಲ್ಕ್‌ಬೋರ್ಡ್ ಜಂಕ್ಷನ್‌ನಿಂದ ಮೈಸೂರು ರಸ್ತೆ ಜಂಕ್ಷನ್‌ವರೆಗೆ ಐದು ಕಡೆ ಮೇಲುರಸ್ತೆ ಹಾಗೂ ರಸ್ತೆ ವಿಭಜಕ ಕಾಮಗಾರಿ ವಹಿಸಿಕೊಳ್ಳಲಿದೆ ಎಂದು ಅಶೋಕ್ ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X