ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆರಿಗೆ ವಂಚನೆ ಎಚ್ ಪಿಗೆ ನೋಟಿಸ್

By Mahesh
|
Google Oneindia Kannada News

HP’s India operation charged with tax evasion
ಬೆಂಗಳೂರು, ಮೇ.7: ಪ್ರಮುಖ ಕಂಪ್ಯೂಟರ್ ತಯಾರಕ ಕಂಪೆನಿ ಹ್ಯೂಲೆಟ್ ಪ್ಯಾಕರ್ಡ್ ಇಂಡಿಯಾ ಸೇಲ್ಸ್ ಪ್ರೈವೇಟ್ ಲಿಮಿಟೆಡ್ ಗೆ 1,450 ಕೋಟಿ ರುಪಾಯಿಗಳ ತೆರಿಗೆ ಪಾವತಿಸುವಂತೆ ಸರ್ಕಾರ ನೋಟಿಸ್ ಜಾರಿ ಮಾಡಿದೆ. ಕಂಪೆನಿಯು ಕಸ್ಟಂಸ್ ತೆರಿಗೆಯನ್ನು ತಪ್ಪಿಸಿದೆ ಎಂದು ಸರ್ಕಾರ ಆರೋಪಿಸಿದ್ದು ಇದನ್ನು ಕಂಪೆನಿಯ ಬೆಂಗಳೂರು ಘಟಕ ತಳ್ಳಿ ಹಾಕಿದೆ.

ಗುಪ್ತಚರ ಕಂದಾಯ ನಿರ್ದೇಶನಾಲಯ ಈ ನೋಟೀಸ್ ಜಾರಿ ಮಾಡಿದ್ದು ಕಂಪೆನಿ ಸಿಂಗಪುರ, ಮತ್ತು ಅಮೆರಿಕಾದಿಂದ ಆಮದು ಮಾಡಿಕೊಳ್ಳಲಾದ ಕಂಪ್ಯೂಟರ್ ಮತ್ತು ಬಿಡಿ ಭಾಗಗಳಿಗೆ ಕಡಿಮೆ ಬೆಲೆ ನಮೂದಿಸಿದೆ ಎಂದು ಹೇಳಲಾಗಿದೆ.

ಇಲಾಖೆಯ ದೆಹಲಿ ಮತ್ತು ಬೆಂಗಳೂರಿನ ಅಧಿಕಾರಿಗಳು 2008ರ ಸೆಪ್ಟೆಂಬರ್ ನಿಂದ ತನಿಖೆ ನಡೆಸುತ್ತಿದ್ದು ಕಳೆದ 5 ವರ್ಷಗಳಿಂದ ಕಂಪೆನಿ ತೆರಿಗೆ ತಪ್ಪಿಸಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಕಂಪೆನಿಯ ವಕ್ತಾರರು ಕಂಪೆನಿಯ ವ್ಯವಹಾರಗಳು ಪಾರದರ್ಶಕವಾಗಿದ್ದು ಈ ವಿಷಯವನ್ನು ನ್ಯಾಯಾಲಯದ ಮೂಲಕ ಬಗೆಹರಿಸಿಕೊಳ್ಳಲಾಗುವುದು ಎಂದರು.

ಕಂಪೆನಿ ಈ ತನಿಖೆ ಕೈಗೆತ್ತಿಕೊಂಡ ನಂತರ ಸ್ವಯಂ ಪ್ರೇರಿತವಾಗಿ 79 ಕೋಟಿ ರೂಪಾಯಿಗಳನ್ನು ಪಾವತಿಸಿದೆ. ಕಂದಾಯ ಗುಪ್ತಚರ ವಿಭಾಗ ದ ಅಧಿಕಾರಿಗಳು ಕಂಪೆನಿಯ ದೆಹಲಿ, ಗುರ್ ಗಾಂವ್, ಮುಂಬೈ ಹಾಗೂ ಬೆಂಗಳೂರಿನ ಕಛೇರಿಗಳಲ್ಲಿ ತನಿಖೆ ನಡೆಸಿದ್ದು ಹಿರಿಯ ಅಧಿಕಾರಿಗಳನ್ನೂ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X