ಮೇ 6ರಂದು ಎಸ್ ಎಸ್ ಎಲ್ ಸಿ ಫಲಿತಾಂಶ

Karnataka SSLC results 2010
ಬೆಂಗಳೂರು, ಮೇ. 4 : 2010 ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶಗಳು, ಮೇ 6ನೇ ತಾರೀಖು ಗುರುವಾರ ಬೆಳಿಗ್ಗೆ ವೆಬ್ ಸೈಟುಗಳಲ್ಲಿ ಪ್ರಕಟವಾಗಲಿವೆ. ಆಯಾ ಶಾಲೆಗಳಲ್ಲಿ ಫಲಿತಾಂಶ 6ನೇ ತಾರೀಖು ಗುರುವಾರ ಮಧ್ಯಾಹ್ನ ಲಭ್ಯವಾಗುತ್ತದೆ.

ಎಸ್ ಎಸ್ ಎಲ್ ಸಿ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

ಕರ್ನಾಟಕ ಎಸ್ ಎಸ್ ಎಲ್ ಸಿ ಬೋರ್ಡ್ ನ ನಿರ್ದೇಶಕ ಎಂ.ಎನ್. ಬೇಗ್ ಈ ವಿಷಯವನ್ನು ಮಂಗಳವಾರ ದಟ್ಸ್ ಕನ್ನಡ ಡಾಟ್ ಕಾಮ್ ಗೆ ತಿಳಿಸಿದರು.

ಬುಧವಾರ ಸಂಜೆ 5 ಗಂಟೆಗೆ ಫಲಿತಾಂಶದ ಸಮಗ್ರ ವಿವರಗಳನ್ನು ನೀಡುವ ಸಲುವಾಗಿ ಪತ್ರಿಕಾಗೋಷ್ಠಿ ಕರೆಯಲಾಗಿದೆ. ಶೇಕಡಾವಾರು ಫಲಿತಾಂಶ, ನಾನಾ ಜಿಲ್ಲೆಗಳಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಗಳಿಸಿದ ಪ್ರತಿಶತ ಅಂಕಗಳ ವಿವರ ಮತ್ತು ವಿವಿಧ ವಿಷಯಗಳಲ್ಲಿ ವಿದ್ಯಾರ್ಥಿಗಳು ಸಾಧಿಸಿದ ಶೇಕಡಾವಾರು ಅಂಕಗಳಿಕೆ ಮುಂತಾದ ವಿವರಗಳನ್ನು ಅವರು ಸುದ್ದಿಗೊಷ್ಠಿಯಲ್ಲಿ ಪ್ರಕಟಿಸಲಿದ್ದಾರೆ.

ಪತ್ರಿಕಾಗೋಷ್ಠಿ ಮುಗಿದ ನಂತರ ನೊಂದಾಯಿಸಿಕೊಂಡ ಅಧಿಕೃತ ಅಂತರ್ಜಾಲ ತಾಣಗಳಿಗೆ ಫಲಿತಾಂಶದ ದತ್ತಾಂಶಗಳನ್ನು ನೀಡಲಾಗುತ್ತದೆ. ಆನಂತರ ವೆಬ್ ಸೈಟುಗಳಲ್ಲಿ ಫಲಿತಾಂಶ ದೊರಕಲು ಶುರುವಾಗುತ್ತದೆ.

ಫಲಿಂತಾಂಶದ ಡೇಟಾಗಳ ಸಂಸ್ಕರಣೆ ಮತ್ತು ಫಲಿತಾಂಶದ ನಿಖರತೆಗಾಗಿ ಕೈಗೊಳ್ಳಲಾಗುವ ಗುಣಮಟ್ಟ ಪರೀಕ್ಷೆಯ ವಿವಿಧ ಹಂತಗಳನ್ನು ದಾಟಿದನಂತರವೇ ಫಲಿತಾಂಶಗಳು ವೆಬ್ ನಲ್ಲಿ ಲಭ್ಯವಾಗುತ್ತವೆ. ದಟ್ಸ್ ಕನ್ನಡ ಅಂತರ್ಜಾಲ ತಾಣವೂ ಫಲಿತಾಂಶ ಪ್ರಕಟಣೆ ಮಾಡುತ್ತಿದ್ದು ವಿದ್ಯಾರ್ಥಿಗಳು ಗುರುವಾರ ಬೆಳಿಗ್ಗೆ 7 ಗಂಟೆಯ ನಂತರ ತಮ್ಮ ಫಲಿತಾಂಶಗಳನ್ನು ಪಡೆಯಬಹುದಾಗಿರುತ್ತದೆ.

ಈ ಬಾರಿ ಅತಿಹೆಚ್ಚು, ಅಂದರೆ 8.5 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಫಲಿತಾಂಶ ಪ್ರಕಟಿಸುವ ಇಂಟರ್ನೆಟ್ ತಾಣಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಂಭವ ಹೆಚ್ಚಾಗಿರುತ್ತದೆ. ಆದ್ದರಿಂದ, ವಿದ್ಯಾರ್ಥಿಗಳು ಮತ್ತು ಪೋಷಕರ ಸಾವಧಾನವಾಗಿದ್ದು, ಕರಾರುವಾಕ್ಕಾದ ಫಲಿತಾಂಶ ಮತ್ತು ಮಾರ್ಕ್ಸ್ ಕಾರ್ಡ್ಗಳನ್ನು ಪಡೆದುಕೊಳ್ಳಬೇಕೆಂದು ದಟ್ಸ್ ಕನ್ನಡ ಮನವಿ ಮಾಡುತ್ತದೆ.

ಕರ್ನಾಟಕ ಎಸ್ ಎಸ್ ಎಲ್ ಸಿ ಫಲಿತಾಂಶ ಈ ತಾಣದಲ್ಲಿ ಲಭ್ಯ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+