ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಕೋಲಾದ ಪವರೇಡ್

ನೂತನ ಪಾನೀಯವನ್ನು ಭಾರತದಲ್ಲೇ ತಯಾರಿಸಲು ಯೋಜಿಸಿದ್ದು ಇದು ಸಾದ್ಯವಾಗದಿದ್ದರೆ ವಿದೇಶಗಳಲ್ಲಿರುವ ತನ್ನ ಘಟಕಗಳಿಂದ ಆಮದು ಮಾಡಿಕೊಳ್ಳಲಿದೆ. ಕಾಮನ್ ವೆಲ್ತ್ ಕ್ರೀಡಾ ಕೂಟದ ಅಧಿಕೃತ ಪಾಲುದಾರನಾಗಿರುವ ಕೋಕಾ ಕೋಲಾ ಕ್ರೀಡಾಪಟುಗಳಿಗೆ, ವೀಕ್ಷಕರಿಗೆ, ಅಧಿಕಾರಿಗಳಿಗೆ ಹಾಗೂ ಸ್ವಯಂ ಸೇವಕರಿಗೆ ಪಾನೀಯ ಸರಬರಾಜು ಮಾಡುವ ಹಕ್ಕು ಹೊಂದಿದೆ.
ಕ್ರೀಡಾಪಟುಗಳು ಸಾಮಾನ್ಯವಾಗಿ ಅನಿಲ ಹೆಚ್ಚಾಗಿರುವ ಪಾನೀಯಗಳನ್ನು ಬಿಟ್ಟು ಕ್ರೀಡಾ ಪಾನೀಯವನ್ನು ಹೆಚ್ಚು ಕುಡಿಯುವುದರಿಂದ ಹೊಸ ಕ್ರೀಡಾ ಪಾನೀಯ ಪವರೇಡ್ ತಯಾರಿಕೆಗೆ ಕೋಕಾ ಕೋಲಾ ಮುಂದಾಗಿದೆ.
ಕೋಕಾ ಕೋಲಾದ ಜಾಗತಿಕ ಪ್ರತಿಸ್ಪರ್ಧಿ ಆಗಿರುವ ಪೆಪ್ಸಿಕೋ 2004ರಿಂದ ಭಾರತದಲ್ಲಿ ವಹಿವಾಟು ನಡೆಸುತಿದ್ದು ಕಳೆದ ತಿಂಗಳು ಇಲ್ಲಿ ಪುಡಿ ರೂಪದ ಮಿಶ್ರಣ ನೀರಿನಲ್ಲಿ ಬೆರೆಸಿ ಸೇವಿಸಬಹುದಾದ ಪಾನೀಯವನ್ನು ಬಿಡುಗಡೆಗೊಳಿಸಿದೆ. ಮತ್ತೊಂದು ಬಹುರಾಷ್ಟ್ರೀಯ ಕಂಪನಿ ಗ್ಲಾಕ್ಸೋ ಸ್ಮಿತ್ ಕ್ಲೈನ್ ಕೂಡ ತನ್ನ ಕ್ರೀಡಾ ಪಾನೀಯವಾದ ಲುಕೊಝಡ್ ನ್ನು ಕಳೆದ ಜನವರಿಯಲ್ಲಿ ಮುಂಬೈ ಮ್ಯಾರಾಥಾನ್ ನ ಸಂದರ್ಭದಲ್ಲಿ ಪ್ರಾಯೋಗಿಕವಾಗಿ ಬಿಡುಗಡೆಗೊಳಿಸಿದ್ದು, ಇದನ್ನು ವಾಣಿಜ್ಯ ಉದ್ದೇಶದಿಂದ ತಯಾರಿಸಲು ನಿರ್ದರಿಸಿದೆ.
ವಿಶ್ವಾದ್ಯಂತ ಅನೇಕ ದೇಶಗಳಲ್ಲಿ ಪವರೇಡ್ ಕಿತ್ತಲೆ, ಬೆರ್ರಿ, ನಿಂಬೆ ಮತ್ತು ಮಾವಿನ ಸುವಾಸನೆಯೊಂದಿಗೆ ಮಾರಾಟವಾಗುತಿದ್ದು ಇದರಲ್ಲಿ ಕಡಿಮೆ ಕ್ಯಾಲೊರಿಯುಳ್ಳ ಪವರೇಡ್ ಕೂಡ ಲಭ್ಯವಿದೆ.












Click it and Unblock the Notifications