ವಿಶ್ವ ಚಾಂಪಿಯನ್ ಗಿರೀಶ್ ಗೆ ಮತ್ತೊಂದು ಗರಿ

ಸ್ಟ್ಯಾನಿ 16ನೇ ನಡೆಯಲ್ಲಿ ತಪ್ಪು ನಡೆ ಇಟ್ಟದ್ದು ಅವರಿಗೇ ಮುಳುವಾಯಿತು. ಇದರೊಂದಿಗೆ 13 ವರ್ಷದ ಗಿರೀಶ್ ಕೌಶಿಕ್ ಅತಿ ಕಿರಿಯ ವಯಸ್ಸಿನ ರಾಜ್ಯ ಚಾಂಪಿಯನ್ ಎಂಬ ಗೌರವಕ್ಕೆ ಪಾತ್ರರಾದರು. ಈ ಮೊದಲು 17 ವರ್ಷದ ಸ್ಟ್ಯಾನಿ ಈ ಗೌರವಕ್ಕೆ ಪಾತ್ರರಾಗಿದ್ದರು. ಗಿರೀಶ್ ಕೌಶಿಕ್ ತನ್ನ ಅಂಕ ಗಳಿಕೆಯನ್ನು 8ಕ್ಕೇರಿಸಿಕೊಂಡು ಅಗ್ರಪಟ್ಟಕ್ಕೇರಿದರೆ, ಅಂತಿಮ ಸುತ್ತಿನಲ್ಲಿ ಟೂರ್ನಿಯ ಹಿರಿಯ ಸ್ಪರ್ಧಿ ಸುಳ್ಯದ ಗೋಪಾಲಕೃಷ್ಣ ಪಿ. ಅವರನ್ನು ಮಣಿಸಿದ ಸ್ಥಳೀಯ ಪ್ರತಿಭೆ ನಿಹಾಲ್ ಮಂಜುನಾಥ್ 7.5 ಅಂಕಗಳೊಂದಿಗೆ ರನ್ನರ್ ಅಪ್ ಆದರು.
10 ವರ್ಷದೊಳಗಿನ ವಿಶ್ವ ಚಾಂಪಿಯನ್ ಕೂಡ ಆಗಿರುವ ಗಿರೀಶ್ ಕೌಶಿಕ್ ಐದನೇ ಸುತ್ತಿನಲ್ಲಿ ಮಂಗಳೂರಿನ ನಿಹಾಲ್ ಮಂಜುನಾಥ್ ವಿರುದ್ಧ ಸೋಲನುಭವಿಸಿದ್ದು ಬಿಟ್ಟರೆ ಉಳಿದೆಲ್ಲ ಪಂದ್ಯಗಳನ್ನೂ ಗೆದ್ದುಕೊಂಡಿದ್ದರು. ಪಂದ್ಯಾವಳಿಯಲ್ಲಿ ಅಗ್ರ ನಾಲ್ಕು ಸ್ಥಾನ ಗಳಿಸಿದ ಗಿರೀಶ್ ಕೌಶಿಕ್, ನಿಹಾಲ್ ಮಂಜುನಾಥ್, ಯಶಸ್ ಡಿ. ಹಾಗೂ ಸ್ಟ್ಯಾನಿ ಜಿ.ಎ. ಅವರು ಹರ್ಯಾಣದ ನೋಯ್ಡಾದಲ್ಲಿ ನಡೆಯುವ ರಾಷ್ಟ್ರೀಯ 'ಬಿ' ಚೆಸ್ ಚಾಂಪಿಯನ್ ಷಿಪ್‌ಗೆ ರಾಜ್ಯ ತಂಡವನ್ನು ಪ್ರತಿನಿಧಿಸಲು ಅರ್ಹತೆ ಪಡೆದಿದ್ದಾರೆ.
ರಾಜ್ಯ ರ‌್ಯಾಪಿಡ್ ಚೆಸ್ ಚಾಂಪಿಯನ್‌ಷಿಪ್ ಏ.30ರಿಂದ ಮೇ 1ರವರೆಗೆ, ರಾಜ್ಯಮಟ್ಟದ ಬ್ಲಿಟ್ಸ್ ಚೆಸ್ ಚಾಂಪಿಯನ್ ಷಿಪ್‌ಮೇ 2ರಂದು ಹಾಗೂ ರಾಜ್ಯಮಟ್ಟದ ಮಹಿಳಾ ಚೆಸ್ ಚಾಂಪಿಯನ್‌ಷಿಪ್ ಮೇ3ರಿಂದ 5ರವರೆಗೆ ಮಂಗಳೂರಿನ ಸುಬ್ರಹ್ಮಣ್ಯ ಸಭಾದಲ್ಲಿ ನಡೆಯಲಿದೆ.












Click it and Unblock the Notifications