ತ್ರೈಮಾಸಿಕದಲ್ಲಿ ಭರ್ಜರಿ ಬೆಳೆ ತೆಗೆದ ಬಯೋಕಾನ್

'ಎಲ್ಲಾ ಕ್ಷೇತ್ರದ ವಹಿವಾಟುಗಳು ಉತ್ತಮ ಬೆಳವಣಿಗೆ ದಾಖಲಿಸಿವೆ. ದೇಶಿಯ ವಹಿವಾಟಿ ನಿಂದ ಶೇ.10 ರಷ್ಟು ಆದಾಯ ಲಭಿಸಿದೆ. ಸಾಗರೋತ್ತರ ಮಾರುಕಟ್ಟೆಗಳು ಶೇ.40ರಷ್ಟು ಕೊಡುಗೆ ನೀಡಿವೆ. ಉಳಿದ ಪಾಲು ಅಮೆರಿಕ ಮತ್ತು ಯೂರೋಪ್ ಮಾರುಕಟ್ಟೆಗಳಿಂದ ಹರಿದುಬಂದಿದೆ' ಎಂದು ಸಂಸ್ಥೆಯ ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಕಿರಣ್ ಮಜುಂದಾರ್ ಶಾ ಹೇಳಿದರು.
ವರ್ಷದ ಅಂತಿಮ ತ್ರೈಮಾಸಿಕದಲ್ಲಿ 666 ಕೋಟಿ ರು. ಆದಾಯದೊಂದಿಗೆ ಶೇ.37ರಷ್ಟು ಬೆಳವಣಿಗೆ ದಾಖಲಿಸಿದೆ. ಈ ಅವಧಿಯಲ್ಲಿ ನಿವ್ವಳ ಲಾಭ 81 ಕೋಟಿ ರು.ಗೆ ಏರಿಕೆಯಾಗಿದೆ. 'ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದ ಬೆಳವಣಿಗೆ ಮುಂದುವರಿ ಯಲಿದೆ. ಈ ಕ್ಷೇತ್ರಕ್ಕೆ ಮತ್ತಷ್ಟು ಬಂಡವಾಳ ಹೂಡಲು ನಿರ್ಧರಿಸಿದ್ದೇವೆ. ಮಲೇಷಿಯಾದಲ್ಲಿ ಉದ್ಯಮ ವಿಸ್ತರಣೆಗೆ ಮುಂದಾಗಿದ್ದು, ಈ ಸಂಬಂಧ ಮಲೇಷಿಯಾ ಜೈವಿಕ ತಂತ್ರಜ್ಞಾನ ನಿಗಮದ ಜತೆ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ'ಎಂದು ಮಜುಂದಾರ್ ಶಾ ತಿಳಿಸಿದರು.












Click it and Unblock the Notifications