ವೈರಸ್ ಚಿಂತೆ ಬಿಡಿ, ಮೊಬೈಲ್ ನಲ್ಲಿ ಬ್ರೌಸ್ ಮಾಡಿ
ಬೆಂಗಳೂರು,
ಏ.30: ದುಬಾರಿ ಮೊಬೈಲ್ ಫೋನ್ ಹಾಗೂ ಸ್ಮಾರ್ಟ್ ಫೋನ್ ಉಳ್ಳವರಿಗೆ ಮೊಬೈಲ್ ವೈರಸ್ ಗಳ ಕಾಟ ಇದ್ದದ್ದೇ. ಗಣಕಗಳಲ್ಲಿ ವೈರಸ್ ತೊಳೆಯಲು ನಾನಾ ರೀತಿಯ ನಿರೋಧಕ ತಂತ್ರಾಂಶಗಳು ಲಭ್ಯವಿದ್ದರೂ, ಮೊಬೈಲ್ ಗೆ ಇನ್ನು ಇಳಿದಿಲ್ಲ. ಸ್ಮಾರ್ಟ್ ಫೋನ್ ಸುರಕ್ಷತೆಗಾಗಿ ಭಾರ್ತಿ ಏರ್ ಟೆಲ್ ಹಾಗೂ ಸಿಮ್ಯಾಂಟೆಕ್ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ. id="toptextpromo">ನಾರ್ಟನ್
ಸ್ಮಾರ್ಟ್ ಫೋನ್ ಸೆಕ್ಯುರಿಟಿಯನ್ನು ಭಾರ್ತಿ ಕಂಪನಿ ತನ್ನ ಏರ್ ಟೆಲ್ ಗ್ರಾಹಕರಿಗೆ ಪರಿಚಯಿಸುತ್ತಿದೆ. ಸ್ವಿಸ್ ಮೂಲದ ಲೊಟರಿಸ್ ಮೊಬೈಲ್ ಇಂಟರ್ ನೆಟ್ ಸೆಕ್ಯುರಿಟಿ ಸೇವಾ ಸಂಸ್ಥೆಯ ವತಿಯಿಂದ ನಾರ್ಟನ್ ಸುರಕ್ಷತೆ ಏರ್ ಟೆಲ್ ಗ್ರಾಹಕರಿಗೆ ಲಭ್ಯವಾಗಲಿದೆ.ಈ ತಂತ್ರಾಂಶವನ್ನು ವಿಂಡೋಸ್ ಮೊಬೈಲ್ ಹಾಗೂ ಸಿಂಬಿಯನ್ ಸ್ಮಾರ್ಟ್ ಫೋನ್ ಬಳಕೆದಾರರೂ ಕೂಡ ಉಪಯೋಗಿಸಬಹುದು. id='are-slot-1' class='oiad oi-axt oiadv'> id='top-searched-articles'>ಗಣಕಗಳು
ಹಾಗೂ ಲ್ಯಾಪ್ ಟಾಪ್ ನ ಮಾಹಿತಿ ಸುರಕ್ಷತೆಗೆ ನೀಡುವಷ್ಟೇ ಪರಿಣಾಮಕಾರಿ ಯಾಗಿ ಮೊಬೈಲ್ ಗಳಿಗೂ ಸುರಕ್ಷತೆ ಒದಗಿಸಲಾಗುತ್ತದೆ. ಸ್ಮಾರ್ಟ್ ಫೋನ್ ಬಳಕೆ ಹೆಚ್ಚುತ್ತಿದ್ದು, ಖಾಸಗಿ ಉಪಯೋಗಕ್ಕೆ ಅಥವಾ ವಾಣಿಜ್ಯ ಉದ್ದೇಶಕ್ಕಾಗಿ ಮೊಬೈಲ್ ನಲ್ಲಿ ಇಂಟರ್ ನೆಟ್ ವಿಹಾರ ಅಧಿಕವಾಗುತ್ತಿದ್ದು, ಸುರಕ್ಷತಾ ವಿಧಾನ ಮಹತ್ವದ ಪಾತ್ರವಹಿಸುತ್ತದೆ. ಇನ್ಮುಂದೆ ಯಾವುದೇ ವೈರಸ್ ಭೀತಿಯಿಲ್ಲದೆ ಏರ್ ಟೆಲ್ ಲೈವ್ ಗೆ ಸಂಪರ್ಕ ಸಾಧಿಸಬಹುದು ಎನ್ನುತ್ತಾರೆ ಭಾರ್ತಿ ಏರ್ ಟೆಲ್ ನ ಮಾರ್ಕೆಟಿಂಗ್ ನಿರ್ದೇಶಕ ಶಿರೀಶ್ ಜೋಶಿ.











Click it and Unblock the Notifications