ಖದೀಮ ಕಾರುಗಳ್ಳ ಪೊಲೀಸ್ ಬಲೆಗೆ
ಬೆಂಗಳೂರು,
ಏ. 29 : ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡ ಕಾರುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಗುರುವಾರ ಯಶಸ್ವಿಯಾಗಿದ್ದಾರೆ. id="toptextpromo">ಮಲ್ಲೇಶ್
ಅಲಿಯಾಸ್ ಮಲ್ಲೇಶಗೌಡ ಬಂಧಿತ ನಕಲಿ ಪೊಲೀಸ್ ಅಧಿಕಾರಿ. ಬ್ಯಾಡ್ಜ್ ಸಮೇತ ಪೊಲೀಸ್ ಇಲಾಖೆಯ ಖಾಕಿ ಬಟ್ಟೆಗಳನ್ನು ಧರಿಸುತ್ತಿದ್ದ ಈತ, ಜಿ ಎಸ್ ಬೋರೇಗೌಡ ಎಂದು ಬೋರ್ಡ್ ಅಂಟಿಸಿಕೊಂಡು ಜನರಿಗೆ ವಂಚಿಸುತ್ತಿದ್ದ. ಟ್ರಾಫಿಕ್ ಸಿಗ್ನಲ್ ಜಂಪ್ ಆಗಿದೆ ಎಂದು ಕಾರು ನಿಲ್ಲಿಸುವುದು, ವಾಹನ ಸವಾರರಿಂದ ಲೈಸೆನ್ಸ್ ಮತ್ತಿತರ ದಾಖಲೆಗಳನ್ನು ಕೇಳುವುದು, ನಂತರ ಯಾಮಾರಿಸಿ ಕಾರುಗಳನ್ನು ಕಳ್ಳತನ ಮಾಡುವುದು ಈತನ ಹವ್ಯಾಸವಾಗಿತ್ತು. ಈ ಬಗ್ಗೆ ನಗರದ ಅನೇಕ ಠಾಣೆಗಳಲ್ಲಿ ದೂರು ಸಹ ದಾಖಲಾಗಿತ್ತು. id='are-slot-1' class='oiad oi-axt oiadv'> id='top-searched-articles'>ಪೊಲೀಸರ
ಬಲೆಗೆ ಸಿಕ್ಕಿಬಿದ್ದಿರುವ ಆರೋಪಿ ಮಹೇಶ್ ನಿಂದ ಎರಡು ಇನ್ನೋವಾ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಆತನ ಸಹಚರರು ಎನ್ನಲಾದ ರಿಯಾನ್ ಮತ್ತು ನಿಯಾಜ್ ಎಂಬುವವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ಕಾರು ಕಳೆದುಕೊಂಡು ಪೊಲೀಸರಿಗೆ ದೂರು ನೀಡಿರುವವರು ಸಂಬಂಧಪಟ್ಟ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಅಡ್ಡಿಯಿಲ್ಲ.











Click it and Unblock the Notifications