ಬ್ಯಾಂಕ್ ಉದ್ಯೋಗಿಗಳಿಗೆ ಬಂಪರ್ ಬೆಳೆ

ಈ ಒಪ್ಪಂದದ ಅನ್ವಯ 1995ರಲ್ಲಿ ಪಿಂಚಣಿ ಯೋಜನೆಗೆ ಸೇರದ ಬ್ಯಾಂಕ್ ಉದ್ಯೋಗಿಗಳು ಮತ್ತೆ ಈ ಸೌಲಭ್ಯ ಪಡೆಯಲು ಅರ್ಹರಾಗಲಿದ್ದಾರೆ. ವೇತನ ಹೆಚ್ಚಳವು 2007ರ ನವೆಂಬರ್ ತಿಂಗಳಿನಿಂದ ಪೂರ್ವಾನ್ವಯಯವಾಗಿ ಜಾರಿಗೆ ಬರಲಿದೆ. ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಬ್ಯಾಂಕ್ ನೌಕರರ ಸಂಘಟನೆಗಳ ಪ್ರತಿನಿಧಿಗಳ ಜೊತೆ ಮಂಗಳವಾರ ಒಪ್ಪಂದಕ್ಕೆ ಬರಲಾಗಿದೆ ಎಂದು ಐಬಿಎದ ಉಪಮುಖ್ಯ ಕಾರ್ಯನಿರ್ವಾಹಕ ಕೆ ಉನ್ನಿಕೃಷ್ಣನ್ ಅವರು ತಿಳಿಸಿದ್ದಾರೆ.
ಈ ವೇತನ ಪರಿಷ್ಕರಣೆ ಫಲವಾಗಿ ಬ್ಯಾಂಕ್ ಗಳಿಗೆ ಒಟ್ಟು 4,816 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ. 2007 ರ ನವೆಂಬರ್ ನಿಂದ ವೇತನ ಹೆಚ್ಚಳ ಯೋಜನೆ ಜಾರಿಗೆ ಬರಲಿದ್ದು, ಸರಕಾರ ಒಂದೇ ಕಂತಿನಲ್ಲಿ ಬಾಕಿ ಹಣ ಪಾವತಿಸಲಿದೆ. 1995ರಲ್ಲಿ ಪಿಂಚಣಿ ಯೋಜನೆಗೆ ಸೇರ್ಪಡೆಗೊಳ್ಳದ ನೌಕರರಿಗೂ ಈ ಒಪ್ಪಂದವು ನೆರವಾಗಲಿದೆ.
ಪಿಂಚಣಿ ಯೋಜನೆ ಒಪ್ಪಿಕೊಳ್ಳದೇ ಭವಿಷ್ಯ ನಿಧಿ(ಪಿಎಫ್) ಸೌಲಭ್ಯ ಆಯ್ಕೆ ಮಾಡಿಕೊಂಡವರು ಈಗ ಮತ್ತೆ ಪಿಂಚಣಿ ಯೋಜನೆಗೆ ಮರು ಸೇರ್ಪಡೆಗೊಳ್ಳಬಹುದು. ಈಗಾಗಲೇ ನಿವೃತ್ತಿಗಾಗಿರುವವರು ಈ ಯೋಜನೆಗೆ ಸೇರಬಹುದಾಗಿದೆ. ಸರಕಾರಿ ಸ್ವಾಮ್ಯದ 26, ಖಾಸಗಿ ವಲಯದ 12 ಮತ್ತು 8 ವಿದೇಶಿ ಬ್ಯಾಂಕ್ ಗಳು ಇದರ ವ್ಯಾಪ್ತಿಗೆ ಬರಲಿವೆ.












Click it and Unblock the Notifications