ಮೆಡಿಕಲ್ ಕಾಲೇಜಿಗೆ ಎಂಸಿಐ ದಿಢೀರ್ ದಾಳಿ
ಶಿವಮೊಗ್ಗ,ಏ.25:
ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ನಿರಂತರ ಅವ್ಯವಹಾರ, ಭ್ರಷ್ಟಾಚಾರ, ಪ್ರೋಫೆಸರ್‌ಗಳ ನೇಮಕಾತಿಗಳಲ್ಲಿ ಅಕ್ರಮ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿಯೇ ಶನಿವಾರಮೆಡಿಕಲ್ ಕೌನ್ಸಿಲಿಂಗ್ ಆಫ್ ಇಂಡಿಯಾ(ಎಂ.ಸಿ.ಐ.) ತಂಡವು ಮೆಡಿಕಲ್ ಕಾಲೇಜಿಗೆ ದಿಢೀರ್ ಭೇಟಿ ನೀಡಿ ದಾಳಿ ನಡೆಸಿತು. id="toptextpromo">ಈ
ಸಂದರ್ಭದಲ್ಲಿ ಮೆಡಿಕಲ್ ಕಾಲೇಜಿಗೆ ಸಂಬಂಧಪಟ್ಟ ಅನೇಕ ದಾಖಲಾತಿಗಳನ್ನು ತಂಡ ಪರಿಶೀಲನೆ ನಡೆಸಿತು. ಈ ವರ್ಷದಲ್ಲಿಯೇ ಎರಡನೇ ಬಾರಿ ಈ ತಂಡ ಮೆಡಿಕಲ್ ಕಾಲೇಜಿಗೆ ಕಾಲಿಟ್ಟಿದೆ. ಕಳೆದ ಬಾರಿ ತಂಡವು ದಂಡ ಹಾಕಿದ್ದನ್ನು ಕೂಡ ಸ್ಮರಿಸಬಹುದು. ಶನಿವಾರ ಕಾಲೇಜಿನ ಆವರಣದಲ್ಲಿ ಕಾರುಗಳದ್ದೇ ಕಾರುಬಾರು. ಬಹುತೇಕ ಎಲ್ಲಾ ಗೈರುಹಾಜರಾದವರೂ ಇಂದು ಹಾಜರಾಗಿದ್ದು, ವಿಶೇಷವಾಗಿತ್ತು. id='are-slot-1' class='oiad oi-axt oiadv'> id='top-searched-articles'>ಇತ್ತೀಚೆಗೆ
ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ನಿರಂತರ ಅವ್ಯವಹಾರ, ಭ್ರಷ್ಟಾಚಾರಗಳು ನಡೆಯುತ್ತಾ ಬಂದಿದ್ದು, ಇಡೀ ಕಾಲೇಜು ವಂಚನೆಯ ಗೂಡಾಗಿದೆ. ಸರ್ಕಾರ ತಕ್ಷಣವೇ ಇಲ್ಲಿನ ಅವ್ಯವಹಾರಗಳನ್ನು ತನಿಖೆಗೆ ಒಳಪಡಿಸಬೇಕೆಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿತ್ತು. ಮೆಡಿಕಲ್ ಕಾಲೇಜಿನ ಅವ್ಯವಹಾರಗಳನ್ನೆಲ್ಲ ದಾಖಲೆ ಸಮೇತ ಸುದ್ದಿಗೋಷ್ಠಿಯಲ್ಲಿ ಡಿಎಸ್ಎಸ್ ಮುಖಂಡ ಗುರುಮೂರ್ತಿ ವಿವರಿಸಿದ್ದರು.











Click it and Unblock the Notifications