ಮೈಸೂರಲ್ಲಿ ಬಾಲಕಿಯ ಅತ್ಯಾಚಾರಕ್ಕೆ ಯತ್ನ
ಮೈಸೂರು,
ಏ. 24 : ಎಂಟು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ನೆರೆಹೊರೆಯ ಯುವಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಗುರುವಾರ ಮೈಸೂರಿನ ನಜಾರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. id="toptextpromo">ಆರೋಪಿಯನ್ನು
ಕೇಬಲ್ ನೆಟ್ವರ್ಕ್ ನಡೆಸುತ್ತಿರುವ ರವಿ (22) ಎಂದು ಹೇಳಲಾಗಿದ್ದು ಆತ ತಲೆತಪ್ಪಿಸಿಕೊಂಡಿದ್ದಾನೆ. ಬಾಲಕಿಯ ಮನೆ ಹತ್ತಿರ ವಾಸವಿರುವ ರವಿ ಬಾಲಕಿಯನ್ನು ಜ್ಯೋತಿನಗರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿ ಪ್ರತಿರೋಧಿಸಿ ದನಿ ಎತ್ತಿದಾಗ ಆಕೆ ಕೂಗು ಕೇಳಿದ ಜನ ಆಕೆ ರಕ್ಷಣೆಗೆ ಧಾವಿಸಿದ್ದಾರೆ. ರವಿ ಕೂಡಲೆ ಕಾಲಿಗೆ ಬುದ್ಧಿ ಹೇಳಿದ್ದಾನೆ. id='are-slot-1' class='oiad oi-axt oiadv'> id='top-searched-articles'>ದಿನಗೂಲಿ
ಮಾಡಿ ಬದುಕು ಹೊರೆಯುತ್ತಿರುವ ಬಾಲಕಿಯ ತಂದೆ ರವಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.











Click it and Unblock the Notifications