ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕ್ಸಲರ ವಿರುದ್ಧ ಅಬ್ಬರಿಸಿದ ಚಿದು

By Mrutyunjaya Kalmat
|
Google Oneindia Kannada News

P Chidamabaram
ನವದೆಹಲಿ, ಏ. 16 : ಮಾವೋವಾದಿಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ. ನನ್ನ ಕೆಲಸದಲ್ಲಿ ತಪ್ಪಾಗಿದ್ದುದ್ದು ಮನಗಂಡು ನಾನು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲು ಮುಂದಾಗಿದ್ದೇನೆ ಹೊರತು ಬೇರಾವ ಕಾರಣವೂ ಇಲ್ಲ ಎಂದು ಕೇಂದ್ರ ಗೃಹ ಸಚಿವ ಪಿ ಚಿದಂಬರಂ ಸ್ಪಷ್ಟಪಡಿಸಿದ್ದಾರೆ.

ನಕ್ಸಲ್ ಪಿಡುಗು ನಿವಾರಿಸುವಲ್ಲಿ ನಮಗೆ ದೃಢಸಂಕಲ್ಪ. ಎದೆಗಾರಿಕೆ ಹಾಗೂ ಹೋರಾಡುವ ಶಕ್ತಿಯ ಅಗತ್ಯವಿದೆ. ಸರಕಾರಕ್ಕೆ ಈ ಮೂರು ಸಾಮರ್ಥ್ಯವಿದೆ ಎಂದು ಲೋಕಸಭೆಗೆ ತಿಳಿಸಿದರು. ಮಾವೋವಾದಿಗಳ ವಿರುದ್ಧ ದೀರ್ಘಕಾಲ ಹೋರಾಟ ನಡೆಸುವ ಶಕ್ತಿ ಸರಕಾರಕ್ಕಿದೆ. ಇದರಲ್ಲಿ ಯಾವ ಸಂಶಯವೂ ಬೇಡ ಎಂದರು. ನಕ್ಸಲ್ ನಿಗ್ರಹ ಕಾರ್ಯತಂತ್ರ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಮೈತ್ರಿಕೂಟ ಇಬ್ಭಾಗಗೊಂಡಿದೆ ಎಂಬ ಪ್ರತಿಪಕ್ಷಗಳ ಟೀಕೆ ಹಿನ್ನೆಲೆಯಲ್ಲಿ ಚಿದಂಬರಂ ವಿವರಣೆ ನೀಡಿದರು.

ಮಾವೋವಾದಿಗಳ ವಿರುದ್ಧ ಹೋರಾಡುವ ಪ್ರಾಥಮಿಕ ಹೊಣೆಗಾರಿಕೆ ಆಯಾ ರಾಜ್ಯ ಸರಕಾರಗಳದ್ದು, ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ಕೇಂದ್ರ ಅಗತ್ಯ ನೆರವು ಒದಗಿಸಲು ಸಿದ್ದ. ನಕ್ಸಲರ ಹಿಡಿತದಲ್ಲಿರುವ ಪ್ರದೇಶವನ್ನು ಮರಳಿ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ರಾಜ್ಯ ಸರಕಾರಗಳ ಹೊಣೆ. ಈ ಕಾರ್ಯಾಚರಣೆಗೆ ಅಗತ್ಯ ನೆರವು ಹಾಗೂ ಅಂತಾರಾಜ್ಯ ಕಾರ್ಯಾಚರಣೆಯಲ್ಲಿ ಸಮನ್ವಯತೆ ಸಾಧಿಸುವುದು ಮಾತ್ರವೇ ಕೇಂದ್ರದ ಜವಾಬ್ದಾರಿ ಎಂದರು.

ದಂತೇವಾಡದಲ್ಲಿ ನಜೆದ 76 ಸಿಆರ್ ಪಿಎಫ್ ಯೋಧರ ನರಮೇಧಕ್ಕೆ ಸಂಬಂಧಿಸಿದಂತೆ ಚಿದಂಬರಂ ರಾಜೀನಾಮೆಗೆ ಮುಂದಾಗಿದ್ದರು. ಆದರೆ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ರಾಜೀನಾಮೆಯನ್ನು ತಿರಸ್ಕರಿಸಿದ್ದರು. ನಕ್ಸಲ್ ನಿಗ್ರಹಕ್ಕೆ ಸರಕಾರದ ಕ್ರಮಕ್ಕೆ ಬಿಜೆಪಿ ಬೆಂಬಲ ಘೋಷಿಸಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X