ಕಾರವಾರದಲ್ಲಿ 26 ಮೀನುಗಾರರು ಪಾರು
ಕಾರವಾರ,
ಏ. 16 : ಕಾರವಾರದ ಬೈತ್ ಕೋಲ್ ಬಂದರು ಬಳಿ ಗೋವಾಕ್ಕೆ ಸೇರಿದ ದೋಣಿಯೊಂದರಲ್ಲಿ ನೀರು ತುಂಬಿ ಮುಳುಗುವ ಭೀತಿಯಲ್ಲಿತ್ತು. ಸಕಾಲದಲ್ಲಿ ನೆರವು ದೊರೆತಿದ್ದರಿಂದ ದೋಣಿ ಮತ್ತು ಅದರಲ್ಲಿದ್ದ ಮೀನುಗಾರರನ್ನು ಪಾರು ಮಾಡಲಾಗಿದೆ. id="toptextpromo">ಕಾರವಾರ
ಬಂದರಿನಿಂದ ಸುಮಾರು ಮೂರು ಕಿ.ಮೀ. ದೂರದಲ್ಲಿರುವ ಲೈಟ್ ಹೌಸ್ ಬಳಿ ಬೆಳಗಿನ ಜಾವ ಗೋವಾಕ್ಕೆ ಸೇರಿದ ಗೋಲ್ಡನ್ ಸೀ ಎಂಬ ದೋಣಿಯಲ್ಲಿ ನೀರು ಸೇರಿಕೊಳ್ಳಲಾರಂಭಿಸಿತ್ತು. ದೋಣಿಯಲ್ಲಿ ಗೋವಾದ 26 ಮೀನುಗಾರರಿದ್ದರು. id='are-slot-1' class='oiad oi-axt oiadv'> id='top-searched-articles'>ಇದನ್ನು
ಗಮನಿಸಿದ ಮಂಗಳೂರಿಗೆ ಸೇರಿದ ದೋಣಿಯಲ್ಲಿದ್ದವರು ಮೀನುಗಾರರನ್ನು ಪಾರು ಮಾಡಿ ದೋಣಿಯನ್ನು ಕಾರವಾರ ಬಂದರು ಬಳಿಗೆ ಎಳೆತಂದಿದ್ದಾರೆ. ದೋಣಿಯಲ್ಲಿ ಸೇರಿಕೊಂಡಿರುವ ನೀರನ್ನು ಹೊರತೆಗೆಯುವ ಕಾರ್ಯ ಭರದಿಂದ ಸಾಗಿದೆ.











Click it and Unblock the Notifications