ಪ್ರಭಾವಿ ವ್ಯಕ್ತಿಗಳ ಪಟ್ಟಿ ವೇಸ್ಟ್ : ಇಂದ್ರಾ ನೂಯಿ
ಶಿಕಾಗೋ,
ಏ.14 : ಪತ್ರಿಕೆಗಳು ಸಿದ್ಧಪಡಿಸುತ್ತಿರುವ ಜಗತ್ತಿನ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯನ್ನು ಗ್ಯಾರೇಜ್ ನಲ್ಲಿ ಇಡುವುದು ಸೂಕ್ತ ಎಂದು ಪೆಪ್ಸಿಕೋ ಕಂಪನಿ ಮುಖ್ಯ ನಿರ್ವಾಹಕ ಅಧಿಕಾರಿ ಇಂದ್ರಾ ನೂಯಿ ಅಭಿಪ್ರಾಯ ಪಟ್ಟಿದ್ದಾರೆ. id="toptextpromo"> ಪ್ರತಿಷ್ಠಿತ ಪತ್ರಿಕೆಗಳಾದ ಫಾರ್ಚೂನ್ ಮತ್ತು ಫೋರ್ಬ್ಸ್ ಗಳಲ್ಲಿ ಪ್ರತಿ ವರ್ಷ ಜಗತ್ತಿನ ಪ್ರಭಾವಿ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತವೆ. ಪ್ರತಿ ವರ್ಷವೂ ನೀವು ಈ ಪಟ್ಟಿಯಲ್ಲಿ ಇರಬೇಕೆ ಎಂಬ ಪ್ರಶ್ನೆಗೆ ನೂಯಿ ಮೇಲಿನಂತೆ ಉತ್ತರಿಸಿದ್ದಾರೆ. ಪತ್ರಿಕೆಗಳು ತಮ್ಮ ಮಾರಾಟ ಹೆಚ್ಚಿಸಿಕೊಳ್ಳಲು ಇದನ್ನು ಸಿದ್ದಪಡಿಸುತ್ತವೆ ಹೊರತು ಇದರಿಂದ ಯಾರಿಗೂ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'> 2001ರಲ್ಲಿ ಅಮ್ಮನನ್ನು ನೋಡಲು ಹೋಗಿದ್ದಾಗ ತಾನು ಪೆಪ್ಸಿಕೋ ಕಂಪನಿ ಮುಖ್ಯಸ್ಥಳಾಗಿ ಆಯ್ಕೆಗೊಂಡಿರುವೆ ಎಂದು ಹೇಳಿದೆ. ಅದಕ್ಕೆ ಆಕೆ, ನೀನು ಮನೆಗೆ ಬಂದಾಗ ಮಗಳು, ತಾಯಿ, ಸೊಸೆ ಅಷ್ಟೆ. ಮುಂದಿನ ಬಾರಿ ಬರುವಾಗ ನಿನ್ನ ಎಲ್ಲ ಕಿರೀಟಗಳನ್ನು ಗ್ಯಾರೇಜ್ ನಲ್ಲಿರಿಸಿ ಮನೆಗೆ ಬಾ ಎಂದಿದ್ದನ್ನು ಅವರು ನೆನಪಿಸಿಕೊಂಡರು. ನನ್ನ ತಾಯಿ ಹೇಳಿದ್ದು ನಿಜವಿದೆ ಎಂದು ಹೇಳಿದರು. 2008 ಮತ್ತು 2009ರಲ್ಲಿ ನೊಯಿ ಫೋರ್ಬ್ಸ್ ಪತ್ರಿಕೆ ಅವರಿಗೆ ಮೂರನೇ ಸ್ಥಾನ ನೀಡಿತ್ತು.











Click it and Unblock the Notifications