ಪಬ್ಲಿಕ್ ಟ್ರಸ್ಟ್ ಕಾಯ್ದೆ ಜಾರಿ : ಆಚಾರ್ಯ
ಬೆಂಗಳೂರು,
ಏ. 13 : ರಾಜ್ಯದಲ್ಲಿ ಶಿಕ್ಷಣ, ಆರೋಗ್ಯ ಮೊದಲಾದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಧಾರ್ಮಿಕೇತರ ಸಂಘಸಂಸ್ಥೆಗಳ ಸಲುವಾಗಿ ಕರ್ನಾಟಕ ಪಬ್ಲಿಕ್ ಟ್ರಸ್ಟ್ ಕಾಯ್ದೆ ಜಾರಿಗೆ ತರಲು ಸರಕಾರ ನಿರ್ಧರಿಸಿದೆ ಎಂದು ಗೃಹ ಮತ್ತು ಮುಜರಾಯಿ ಖಾತೆ ಸಚಿನ ವಿ ಎಸ್ ಆಚಾರ್ಯ ಹೇಳಿದ್ದಾರೆ. id="toptextpromo"> ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಮೊದಲು ಬಾಂಬೆ ಪಬ್ಲಿಕ್ ಟ್ರಸ್ಟ್ ಕಾಯ್ದೆ(ಬಿಪಿಟಿ)ಯಲ್ಲಿ ಎಲ್ಲ ಸಂಘಸಂಸ್ಥೆಗಳು ನೋಂದಣಿಯಾಗಿದ್ದವು ಎಂದರು. ಬಿಪಿಟಿಯಲ್ಲಿ 15899 ಸಂಸ್ಥೆಗಳು ನೋಂದಣಿಯಾಗಿದ್ದವು. ರಾಜ್ಯ ಸರಕಾರ ಹಿಂದೂ ಧಾರ್ಮಿಕ ದತ್ತಿ ಕಾಯ್ದೆ ರಚನೆ ಮಾಡಿದ ನಂತರ ಅದರ ಅಡಿಯಲ್ಲಿ ಸುಮಾರು 9 ಸಾವಿರ ಧಾರ್ಮಿಕ ಸಂಸ್ಥೆಗಳು ನೋಂದಣಿಯಾದವು. ಧಾರ್ಮಿಕೇತರ ಸಂಸ್ಥೆಗಳು ಸುಮಾರು 5680 ಹೊರಗೆ ಉಳಿದವು. id='are-slot-1' class='oiad oi-axt oiadv'> id='top-searched-articles'> ಅವುಗಳ ಅನುಕೂಲಕ್ಕಾಗಿ ಕರ್ನಾಟಕ ಪಬ್ಲಿಕ್ ಟ್ರಸ್ಟ್ ಕಾಯ್ದೆ ರಚನೆ ಮಾಡಲು ನಿರ್ಧರಿಸಲಾಗಿದೆ. ಮುಂದಿನ ಅಧಿವೇಶನದಲ್ಲಿ ಮಂಡನೆ ಮಾಡಬೇಕೆಂದು ಉದ್ದೇಶಿಸಲಾಗಿದೆ ಎಂದು ಅವರು ವಿವರಿಸಿದರು.











Click it and Unblock the Notifications