ಮತ್ತೆ ದುಬಾರಿಯಾಯ್ತು ನಂದಿನಿ ಹಾಲು
ಬೆಂಗಳೂರು,
ಏ.7: ನಂದಿನ ಹಾಲಿನ ದರವನ್ನು ಮತ್ತೆ ಏರಿಸಲಾಗಿದೆ. ಹಾಲಿನ ಬೆಲೆ ಪ್ರತಿ ಲೀಟರ್ ಗೆ ಮೂರು ರು. ನಷ್ಟು ದುಬಾರಿಯಾಗಲಿದ್ದು, ಪರಿಷ್ಕೃತ ದರ ನಾಳೆಯಿಂದಲೇ ಜಾರಿಯಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಹೇಳಿದ್ದಾರೆ. ಆದರೆ, ಹಾಲಿನ ಇತರೆ ಉತ್ಪನ್ನಗಳ ಬೆಲೆ ಏರಿಕೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಅಧ್ಯಕ್ಷರು, ಸದ್ಯದಲ್ಲೇ ಸಂಪೂರ್ಣ ಪರಿಷ್ಕೃತ ದರ ಪಟ್ಟಿ ಪ್ರಕಟಿಸುವುದಾಗಿ ಹೇಳಿದರು. id="toptextpromo">ಹೈನುಗಾರಿಕೆ
ಅಭಿವೃದ್ಧಿಗೆ ಪ್ರೋತ್ಸಾಹ ಕೊಡುವ ಉದ್ದೇಶದಿಂದ ಹಾಲಿನ ದರ ಏರಿಕೆ ಮಾಡಲಾಗುವುದು ಎಂಬ ಸಿಎಂ ಹೇಳಿಕೆಯನ್ನು ಸಮರ್ಥಿಸಿಕೊಂಡ ಕೆಎಂ ಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಅವರು,ಕಳೆದ ಮೂರು ವರ್ಷಗಳಿಂದ ದರ ಏರಿಸಿರಲಿಲ್ಲ. ರೈತರ ಉಪಯೋಗಕ್ಕಾಗಿ ಈ ಕ್ರಮ ಕೈಗೊಳ್ಳಬೇಕಾಯಿತು ಎಂದರು. id='are-slot-1' class='oiad oi-axt oiadv'> id='top-searched-articles'>ರೈತರ
ಕುಟುಂಬಕ್ಕೆ ಆರೋಗ್ಯ ವಿಮೆ ಯೋಜನೆ ಜಾರಿಗೊಳಿಸಲಾಗುವುದು. ದರ ಏರಿಕೆ ನಂತರವೂ ರಾಜ್ಯದಲ್ಲೇ ಕಡಿಮೆ ಬೆಲೆ. ಹಾಲು ಉತ್ಪಾದಕರಿಗೆ 2.50 ರು ಲಭಿಸಲಿದೆ. ಎಂದಿದ್ದಾರೆ. ನೂತನ ದರ ಏರಿಕೆಯಂತೆ ನಂದಿನಿ ಟೋನ್ಡ್ ಹಾಲಿನ ದರ ಪ್ರತಿ ಲೀಟರ್ ಗೆ 16 ರು ನಿಂದ 19 ರು ಆಗಲಿದೆ.











Click it and Unblock the Notifications