ಸಂಸ್ಕೃತಿ ಎತ್ತಿ ಹಿಡಿಯುವಲ್ಲಿ ದಿಟ್ಟತನ: ಸಿಎಂ
ಬೆಂಗಳೂರು
ಎ 7 : ಭಾರತೀಯ ಸಂಸ್ಕೃತಿ ಮತ್ತು ಸನಾತನ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ನಮ್ಮ ಸರಕಾರ ದಿಟ್ಟತನ ತೋರಿದೆ. ಗೋ ಸಂರಕ್ಷಣೆ, ಸಂಸ್ಕೃತ ವಿವಿ ಸ್ಥಾಪನೆ, ಕೃಷ್ಣದೇವರಾಯನ ಪಟ್ಟಾಭಿಷೇಕ ಸಮಾರಂಭ ನಡೆಸಿದ್ದೇವೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಒದಗಿಸಲು ಶ್ರಮಿಸಿದ್ದೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪಹೇಳಿದರು. id="toptextpromo">ಅಖಿಲ
ಕರ್ನಾಟಕ ಸಂಸ್ಕೃತ ಕಾಲೇಜುಗಳ ಸಂಘ ಮತ್ತು ರಾಜ್ಯ ಸಂಸ್ಕೃತ ವಿಶ್ವವಿದ್ಯಾಲಯ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡುತ್ತಿದ್ದ ಸಿಎಂ, ಸನಾತನ ಮೌಲ್ಯಗಳ ಸಂಸ್ಕೃತಿಗಳನ್ನು ಅಳವಡಿಸಿಕೊಂಡಿರುವ ಸಂಸ್ಕೃತ ಭಾಷೆಯ ಅಭಿವೃದ್ದಿಗೆ ಶ್ರಮಿಸುವುದು ನಮ್ಮೆಲ್ಲರ ಕರ್ತವ್ಯ. ಸಂಸ್ಕೃತ ಭಾಷೆ ನಮ್ಮೆಲ್ಲರ ಮಾತೃ ಭಾಷೆ ಅದರಲ್ಲಿ ಜ್ಞಾನ ಭಂಡಾರವೇ ಅಡಗಿದೆ ಎಂದು ಈ ಸಂದರ್ಭದಲ್ಲಿ ಹೇಳಿಕೆನೀಡಿದರು. id='are-slot-1' class='oiad oi-axt oiadv'> id='top-searched-articles'>ರಾಜ್ಯ
ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡುತ್ತಾ, ನಾನು ಹಳ್ಳಿಯಿಂದ ಬಂದವನು. ಒರಟಾಗಿ ಬೆಳೆದಿದ್ದೆ, ಈಗ ನನ್ನ ವ್ಯಕ್ತಿತ್ವದಲ್ಲಿ ಸಂಸ್ಕೃತಿ ಇದೆ ಅಂತಾದರೆ ಅದು ಸಂಸ್ಕೃತ ಕಲಿಯಲು ಆರಂಭಿಸಿದ ನಂತರ. ಸಂಸ್ಕೃತ ಮನುಷ್ಯನ ವ್ಯಕ್ತಿತ್ವವನ್ನು ಬದಲಿಸುತ್ತದೆ ಎನ್ನುವುದು ಸತ್ಯ ಎಂದರು.











Click it and Unblock the Notifications