ಉಳಿತಾಯ ಖಾತೆಯಲ್ಲಿ ದುಡ್ಡು ಇದ್ದರೆ ಹೆಚ್ಚು ಬಡ್ಡಿ
ನವದೆಹಲಿ,
ಏ. 1 : ಉಳಿತಾಯ ಖಾತೆ ಹೊಂದಿರುವ ಬ್ಯಾಂಕ್ ಗ್ರಾಹಕರಿಗೆ ರಿಸರ್ವ್ ಬ್ಯಾಂಕ್ ಆಪ್ ಇಂಡಿಯಾ ಸಿಹಿ ಸುದ್ದಿ ನೀಡಿದೆ. ಬ್ಯಾಂಕಿನಲ್ಲಿ ಉಳಿತಾಯ ಖಾತೆಯಲ್ಲಿ ಜೋಪಾನವಾಗಿಟ್ಟ ಹಣಕ್ಕೆ ಇನ್ನು ಮುಂದೆ ಶೇ.10ರಷ್ಟು ಹೆಚ್ಚಿನ ಬಡ್ಡಿ ದೊರೆಯಲಿದೆ. ಬಡ್ಡಿಯನ್ನು ತಿಂಗಳ ಆಧಾರದ ಮೇಲೆ ಲೆಕ್ಕ ಹಾಕುವ ಬದಲು ದಿನದ ಆಧಾರದ ಮೇಲೆ ಬಡ್ಡಿ ನೀಡಲು ಆರ್ಬಿಐ ಬ್ಯಾಂಕುಗಳಿಗೆ ಆದೇಶಿಸಿದೆ. id="toptextpromo">ಉಳಿತಾಯ
ಖಾತೆ(ಸೇವಿಂಗ್ಸ್ ಅಕೌಂಟ್)ಯಲ್ಲಿರುವ ಹಣಕ್ಕೆ ಎಪ್ರಿಲ್ ಒಂದರಿಂದ ಶೇ.0.30ರಿಂದ ಶೇ.0.40ರಷ್ಟು ಹೆಚ್ಚು ಬಡ್ಡಿ ಪಾವತಿ ಆಗಲಿದೆ, ಅಲ್ಲದೇ ಖಾತೆಯಲ್ಲಿನ ಹಣಕ್ಕೆ ದಿನದ ಲೆಕ್ಕಾಚಾರ ಆಧರಿಸಿ ಬಡ್ಡಿ ಲೆಕ್ಕಾಚಾರ ಮಾಡಲಾಗುವುದು. ರಿಸರ್ವ್ ಬ್ಯಾಂಕ್ ನಿರ್ದೇಶನದಂತೆ ಎಲ್ಲಾ ವಾಣಿಜ್ಯ ಬ್ಯಾಂಕ್ ಗಳು ಹೊಸ ಹಣಕಾಸು ವರ್ಷದಿಂದ ಈ ನೂತನ ವಿಧಾನ ಜಾರಿಗೆ ತಂದಿವೆ. id='are-slot-1' class='oiad oi-axt oiadv'> id='top-searched-articles'>ಇಲ್ಲಿಯವರೆಗೆ
ತಿಂಗಳ ಹನ್ನೊಂದನೇ ತಾರೀಕಿನಿಂದ ತಿಂಗಳ ಕೊನೆಯ ದಿನದ ಮಧ್ಯೆ ಇರುವ ಕನಿಷ್ಠ ಮೊತ್ತಕ್ಕೆ ಶೇ.3.5ರಷ್ಟು ಬಡ್ಡಿ ವಿಧಿಸಲಾಗುತ್ತಿತ್ತು ಮತ್ತು ಈ ಬಡ್ಡಿ ಮೊತ್ತವನ್ನು ಆರು ತಿಂಗಳಿಗೊಮ್ಮೆ (ಅಂದರೆ ಮಾರ್ಚ್ ಮತ್ತು ಸೆಪ್ಟೆಂಬರ್ ನಲ್ಲಿ) ಗ್ರಾಹಕರಿಗೆ ಪಾವತಿಸಲಾಗುತ್ತಿತ್ತು. ಇದರ ಅರ್ಥ, ನಿಮ್ಮ ಖಾತೆಯಲ್ಲಿ ಸಾವಿರ ರು. ಇದ್ದು, ಮರುದಿನ ಒಂದು ಲಕ್ಷ ರು. ಜಮೆ ಮಾಡಿದರು ಕೂಡ ಬಡ್ಡಿ ಸಿಗುತ್ತಿದ್ದುದು ಸಾವಿರ ರು. ಮೇಲೆಯೇ. ಹೊಸ ನಿಯಮದ ಪ್ರಕಾರ ಪ್ರತಿದಿನ ಖಾತೆಯಲ್ಲಿರುವ ಮೊತ್ತಕ್ಕೆ ಆಯಾ ದಿನವೇ ಬಡ್ಡಿ ಹಾಕಲಾಗುವುದು ಆದರೆ ಬಡ್ಡಿ ಪಾವತಿ ಮಾತ್ರ ಆರು ತಿಂಗಳಿಗೊಮ್ಮೆ. ಭಾರತೀಯ ರಿಸರ್ವ್ ಬ್ಯಾಂಕ್ 2009-10ರ ಹಣಕಾಸು ನೀತಿಯಲ್ಲಿಯೇ ಏಪ್ರಿಲ್ 1, 2010ರಿಂದ ಈ ಸೌಲಭ್ಯ ಜಾರಿಗೆ ತರುವುದಾಗಿ ಘೋಷಿಸಿತ್ತು. ಎಲ್ಲ ಬ್ಯಾಂಕುಗಳು ಆರ್ ಬಿಐನ ಈ ನಿರ್ದೇಶನವನ್ನು ಸ್ವಾಗತಿಸಿವೆ.











Click it and Unblock the Notifications