ಗೂಗಲ್ ಬಳಸಿ ಆನ್‌ಲೈನ್ ಶಾಪಿಂಗ್!
ಬೆಂಗಳೂರು,
ಏ.1 : ವಿಶ್ವದ ಅತಿ ದೊಡ್ಡ ಅಂತರ್ಜಾಲ ಕಂಪೆನಿ ಗೂಗಲ್ ತನ್ನ ಭಾರತದ ಗ್ರಾಹಕರ ಅಂತರ್ಜಾಲ ಶೋಧನೆಗೆ ಹೊಸ ಉಪಕರಣವಾದ ಗೂಗಲ್ ಶಾಪಿಂಗ್‌ನ್ನು ಸೇರಿಸಿಕೊಂಡಿದೆ. ಇದು ದೇಶದ ಸಹಸ್ರಾರು ವೆಬ್‌ಸೈಟ್‌ಗಳಿಂದ ಹೆಸರುಗಳು, ಉತ್ಪನ್ನಗಳು, ಮಾಹಿತಿ ಮತ್ತು ಬೆಲೆಯನ್ನು ಜಾಲಾಡಿ ಗ್ರಾಹಕರಿಗೆ ಒದಗಿಸಲಿದೆ. id="toptextpromo">ಸುದ್ದಿಗಾರರೊಂದಿಗೆ
ಮಾತನಾಡಿದ ಗೂಗಲ್ಇಂಡಿಯಾದ ಉತ್ಪನ್ನ ವಿಭಾಗದ ಮುಖ್ಯಸ್ಥ ವಿನಯ್ ಗೋಯೆಲ್, ಈ ಹೊಸ ಶೋಧನಾ ಉಪಕರಣವನ್ನು ಗ್ರಾಹಕರ ಶೀಘ್ರ ತೀರ್ಮಾನಗಳಿಗೆ ಹಾಗೂ ಹೆಚ್ಚಿನ ಶೋಧನೆಯನ್ನು ಅಲ್ಪಾವಧಿಯಲ್ಲಿ ಕೈಗೊಳ್ಳುವಂತೆ ವಿನ್ಯಾಸ ಮಾಡಲಾಗಿದ್ದು, ಸಮೀಕ್ಷೆಯೊಂದರ ಪ್ರಕಾರ ದೇಶದ ಗ್ರಾಹಕರು ತಮ್ಮ ಸಮಯದ ಶೇ.35ರಷ್ಟನ್ನು ಅಂತರ್ಜಾಲ ಮೂಲಕ ವಸ್ತುವಿನ ಸಂಶೋಧನೆ ಮಾಡಿ ನಂತರಕೊಳ್ಳುತ್ತಾರೆ.30 ಸಾವಿರಕ್ಕೂ ಹೆಚ್ಚು ಭಾರತೀಯ ಅಂತರ್ಜಾಲ ಪುಟಗಳನ್ನು ಶೋಧಿಸಿ ಗ್ರಾಹಕರು ಮಾಹಿತಿ ಪಡೆಯಬಹುದಾಗಿದೆ ಎಂದರು. id='are-slot-1' class='oiad oi-axt oiadv'> id='top-searched-articles'>ಈ
ಶೋಧನಾ ಉಪಕರಣದಿಂದ ಒಂದೇ ವಸ್ತುವನ್ನು ಉತ್ಪಾದಿಸುವ, ಮಾರಾಟ ಮಾಡುವ ನೂರಾರು ಕಂಪೆನಿಗಳನ್ನು ಏಕ ಕಾಲದಲ್ಲಿ , ಒಂದೇ ಪುಟದಲ್ಲಿ ಪರಿಶೀಲಿಸಬಹುದಾಗಿದೆ. ತ್ವರಿತವಾಗಿ ಹಾಗೂ ಸರಿ ಬೆಲೆಯ ಉತ್ಪನ್ನ ಖರೀದಿಗೆ ಈ ಉಪಕರಣ ಸಹಾಯಕವಗಿದೆ.











Click it and Unblock the Notifications