ಮಕ್ಕಳ ಶಿಕ್ಷಣ ಇದೀಗ ಮೂಲಭೂತ ಹಕ್ಕು
ನವದೆಹಲಿ,
ಏ. 1 : ಶಿಕ್ಷಣವು ದೇಶದ ಪ್ರತಿಯೊಬ್ಬ ಮಗುವಿನ ಮೂಲಭೂತ ಹಕ್ಕನ್ನಾಗಿ ಮಾಡುವಂತಹ ಐತಿಹಾಸಿಕ ಕಾನೂನು ಇಂದು ಜಾರಿಗೆ ಬರಲಿದೆ. ಸದ್ಯ ಶಾಲೆಯಿಂದ ಹೊರಗುಳಿದಿರುವ ಸುಮಾರು ಒಂದು ಕೋಟಿ ಮಕ್ಕಳಿಗೆ ಇದರಿಂದ ನೆರವಾಗಲಿದೆ. id="toptextpromo"> ಈ ಯೋಜನೆ ಕುರಿತು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ದೇಶದಲ್ಲಿ 6 ರಿಂದ 14 ವರ್ಷದೊಳಗಿನ 22 ಕೋಟಿ ಮಕ್ಕಳಿದ್ದು, ಶೇ.4.6ರಷ್ಟು ಮಕ್ಕಳು ಶಾಲೆಯಿಂದ ಸದ್ಯಹೊರಗುಳಿದಿದ್ದಾರೆ. ಅವರೆಲ್ಲರೂ ಇನ್ನು ಮುಂದೆ ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕಾಗುತ್ತದೆ. ಈ ವಯೋಮಿತಿಯೊಳಗಿನ ಎಲ್ಲ ಮಕ್ಕಳೂ ಶಾಲೆಗೆ ಹೋಗುತ್ತಿರುವುದನ್ನು ಗಮನಿಸುವ ಹೊಣೆಗಾರಿಕೆ ರಾಜ್ಯ ಮತ್ತು ಸ್ಥಳೀಯ ಆಡಳಿತ ಮೇಲೆ ಇದೆ. id='are-slot-1' class='oiad oi-axt oiadv'> id='top-searched-articles'> ಈ ಯೋಜನೆ ಜಾರಿ ಮಾಡುವ ಸಂಬಂಧ ಎಲ್ಲ ವಿಷಯಗಳನ್ನೂ ಕೇಂದ್ರ ಮತ್ತು ರಾಜ್ಯಗಳು ಬಗೆಹರಿಸಿಕೊಂಡ ಬಳಿಕ ಬರುವ ವೆಚ್ಚವನ್ನು 55:45 ಅನುಪಾತದಲ್ಲಿ ಭರಿಸುವ ಒಪ್ಪಿಗೆಯೊಂದಿಗೆ ಈ ಕಾನೂನು ಜಾರಿಗೆ ಬರುತ್ತಿದೆ. ಯುಪಿಎ ಸರಕಾರದ ಪ್ರಮುಖ ಯೋಜನೆ ಇದನ್ನು ಬಿಂಬಿಸಲಾಗಿದೆ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಮಾಹಿತಿ ಹಕ್ಕು ಕಾಯ್ದೆ ಯೋಜನೆಗಳು ಯುಪಿಎ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಾಗಿವೆ.











Click it and Unblock the Notifications