ಪ್ರಕೃತಿ ವಿರುದ್ದವಾದ ಲೈಂಗಿಕತೆ ಸಲ್ಲ

ಮದುವೆಯಾಗಿ ಮಗು ಪಡೆದರೆ ಅಪರಾಧವಲ್ಲ. ಆದರೆ, ಮದುವೆಗೂ ಮುನ್ನ ಈ ಕೆಲಸ ಮಾಡುವುದು ತಪ್ಪು. ಗಂಡ ಹೆಂಡಿರ ಸಂಬಂಧದಲ್ಲಿ ಮಕ್ಕಳನ್ನು ಪಡೆಯಬೇಕು ಎಂದು ಸಾವಿರಾರು ವರ್ಷಗಳ ಹಿಂದಿನ ಮಿತ್ರಾಕ್ಷರ ಕಾನೂನು ಹೇಳಿದೆ ಎಂದು ಅವರು ವಿವರಿಸಿದರು. ಸಾರ್ವಜನಿಕ ಆಸ್ತಿ ಹಾಳು ಮಾಡುವ ಸಂದರ್ಭದಲ್ಲಿ ನೋಡುತ್ತಾ ನಿಲ್ಲುವುದು ತಪ್ಪು. ಇಂಥವರೂ ಶಿಕ್ಷೆಗೆ ಗುರಿಯಾಗುತ್ತಾರೆ. ಕೌಟಿಲ್ಯನ ಅರ್ಥಶಾಸ್ತ್ರದ ಪ್ರಕಾರ ಯಾರದ್ದಾದರೂ ಮನೆಗೆ ಬೆಂಕಿ ಬಿದ್ದರೆ ಪಕ್ಕದ ಮನೆಯವರು ನೋಡುತ್ತಾ ನಿಲ್ಲಬಾರದು ಎಂದು ಅವರು ಕಿವಿ ಮಾತು ಹೇಳಿದರು.












Click it and Unblock the Notifications