ಏಳು ಪುತ್ರಿಯರ ತಂದೆ ಲಾಲೂ ಮಸೂದೆ ಬೆಂಬಲಿಸಲಿ
ನವದೆಹಲಿ,
ಮಾ.10: ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸುತ್ತಿರುವ ಆರ್ ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರನ್ನು ಕಾಂಗ್ರೆಸ್ ಅಧ್ಯಕ್ಷೆ ಲಘುವಾಗಿ ಛೇಡಿಸಿದ್ದಾರೆ. ಏಳು ಪುತ್ರಿಯರ ತಂದೆಯಾಗಿರುವ ಲಾಲೂ ಮಹಿಳಾ ಮೀಸಲಾತಿ ಮಸೂದೆಯನ್ನು ಬೆಂಬಲಿಸಲಿ ಎಂದಿದ್ದಾರೆ. id="toptextpromo">ಲಾಲೂ
ಕುಟುಂಬದಲ್ಲಿ ಮಸೂದೆ ವ್ಯಾಪ್ತಿಗೆ ಏಳು ಮಂದಿ ಒಳಪಡುತ್ತಾರೆ. ಹಾಗಾಗಿ ಮಸೂದೆಯನ್ನು ಬೆಂಬಲಿಸಿ ಎಂದು ಲಾಲೂ ಹೇಳಿದ್ದಾಗಿ ಸೋನಿಯಾ ತಿಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಲಾಲೂ ನಕ್ಕ್ಕಿದ್ದಾಗಿ ಅವರು ಹೇಳಿದರು. ಲಾಲೂ ಹಾಗೂ ಮುಲಾಯಂ ಸಿಂಗ್ ಯಾದವ್ ಜೊತೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಸೋನಿಯಾ ಮಾತನಾಡುತ್ತಿದ್ದರು. id='are-slot-1' class='oiad oi-axt oiadv'> id='top-searched-articles'>ಮಹಿಳಾ
ಮೀಸಲಾತಿ ಮಸೂದೆಗೆ ನಮ್ಮ ಹಳೆಯ ಮಿತ್ರ ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ. ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸುತ್ತಿರುವ ಲಾಲೂ ಮತ್ತು ಯಾದವ್ ಅವರೊಂದಿಗೆ ಸೋನಿಯಾ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು.











Click it and Unblock the Notifications