2010ರಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ

2010-11 ರ ವರ್ಷದಲ್ಲಿ ಸುಮಾರು 10 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿದ್ದು, ಅನುಭವ ಹೊಂದಿರುವ ನುರಿತ ಉದ್ಯೋಗಿಗಳಿಗೆ ಬೇಡಿಕೆ ಹೆಚ್ಚಲಿದೆ ಎಂದು ಚೆನ್ನೈ ಮೂಲದ ಮಾ ಪೈ ಮ್ಯಾನೇಜ್ ಮೆಂಟ್ ಕನ್ಸ್ ಲ್ಟನ್ಸಿ ತಿಳಿಸಿದೆ. ಮುಂದಿನ ನಾಲ್ಕು ತಿಂಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ. ಬೆಂಗಳೂರು, ಚೆನ್ನೈ, ಕೊಲ್ಕತ್ತಾ ಮತ್ತು ಮುಂಬೈ ನಗರಗಳು ಸೇರಿದಂತೆ ಅಹಮದಾಬಾದ್, ಪುಣೆಯಂತಹ ನಗರಗಳಲ್ಲಿಯೂ ಉದ್ಯೋಗಗಳು ಭಾರಿ ಪ್ರಮಾಣದಲ್ಲಿ ಸೃಷ್ಟಿಯಾಗಲಿವೆ ಎಂದು ಸರ್ವೆ ಹೇಳಿದೆ.
ಬ್ಯಾಂಕಿಂಗ್, ವಿಮಾ ಕಂಪನಿ, ಶಿಕ್ಷಣ, ಇಂಧ, ಆರೋಗ್ಯ, ಆಸ್ಪತ್ರೆ, ಪ್ರವಾಸ, ಐಟಿ, ಬಿಪಿಓ, ರಿಯಲ್ ಎಸ್ಟೇಟ್, ಸಾರಿಗೆ, ವಾಣಿಜ್ಯ ಸೇರಿದಂತೆ ದೇಶದ 11 ಪ್ರಮುಖ ಕಂಪನಿಗಳ ಸರ್ವೆ ಮಾಡಿದಾಗ ಈ ವಿಷಯ ಸ್ಪಷ್ಟವಾಗಿದ್ದು, ಮುಂದಿನ ಮೂರು ತಿಂಗಳಲ್ಲಿ ಉದ್ಯೋಗಬೇಟೆ ಆರಂಭಿಸುವುದಾಗಿ ಕಂಪನಿ ಮುಖ್ಯಸ್ಥರು ತಿಳಿಸಿದ್ದಾರೆ ಎಂದು ಸರ್ವೆ ಹೇಳಿದೆ.
ಐಟಿಯಲ್ಲಿ 1 ಲಕ್ಷ, ಬಿಪಿಓ 1 ಲಕ್ಷ, ಆರೋಗ್ಯ ಕ್ಷೇತ್ರದಲ್ಲಿ 3 ಲಕ್ಷ, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ 1.36 ಲಕ್ಷ, ಬ್ಯಾಂಕಿಂಗ್ 86 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸರ್ವೆ ಹೇಳಿದೆ.












Click it and Unblock the Notifications