ಏ.28, 29ರಂದು ಸಿಇಟಿ, ಲಿಂಬಾವಳಿ

ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಆಯ್ದ 30ಜಿಲ್ಲಾ ಮತ್ತು 13 ತಾಲ್ಲೂಕು ಕೇಂದ್ರಗಳಲ್ಲಿ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ದತೆ ಮಾಡಿಕೊಂಡಿದೆ. ಏ.28 ರಂದು ಬೆಳಗ್ಗೆ 10.30ರಿಂ0 11.50ರ ವರಗೆ ಜೀವಶಾಸ್ತ್ರ, ಮಧ್ಯಾಹ್ನ 2.30ರಿಂದ 350ರ ವರೆಗೆ ಗಣಿತ, ಏ.29 ರಂದು ಬೆಳಗ್ಗೆ 10.30ರಿಂದ 11.50ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2.30ರಿಂದ 3.50ರವೆರೆಗೆ ರಸಾಯಮ ಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.
ಗ್ರಾಮೀಣ ಪ್ರದೇಶದ ಸಿಇಟಿ ಕೋಚಿಂಗ್ ಗೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈಗಿರುವ 101 ಕೇಂದ್ರಗಳ ಜೊತೆಗೆ ಮುಂದಿನ ವರ್ಷದಿಂದ ಮತ್ತಷ್ಟು ಗ್ರಾಮೀಣ ಸಿಇಟಿ ಕೋಚಿಂಗ್ ಕೇಂದ್ರಗಳನ್ನು ತೆರೆಯಲು ಪ್ರಯತ್ನಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಅಭ್ಯರ್ಥಿಗಳಿಗೆ ಬ್ರೋಷರ್ ಮತ್ತು ಅರ್ಜಿ ನಮೂನೆಗಳನ್ನು ಈಗಾಗಲೇ ನಿಗದಪಡಿಸಿದಂತೆ ಈ ತಿಂಗಳ 10 ರ ನಂತರ ಸಂಬಂಧಿಸಿದ ಕಾಲೇಜುಗಳಿಗೆ ಕಳುಹಿಸಲಾಗುವುದು. ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು ಮಾ. 17ರೊಳಗೆ ಸಲ್ಲಿಸಬೇಕು ಎಂದು ಸಿಇಟಿ ಬ್ರೋಷರ್ ಬಿಡುಗಡೆ ನಂತರ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಲಿಂಬಾವಳಿ ವಿವರಿಸಿದರು.
ಕರ್ನಾಟಕ ಸಿಇಟಿ 2010 ಪರೀಕ್ಷೆ ವೇಳಾಪಟ್ಟಿ












Click it and Unblock the Notifications