ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಕಂಪನಿಗಳ ನಿದ್ದೆ ಕೆಡಿಸಿರುವ ಸೈಬರ್ ದಾಳಿ

By Prasad
|
Google Oneindia Kannada News

Cyber attack more worrisome than terrorism
ಬೆಂಗಳೂರು, ಮಾ. 9 : ಪ್ರಕೃತಿ ವಿಕೋಪ, ಭಯೋತ್ಪಾದಕ ದಾಳಿಗಿಂತ ಸೈಬರ್ ದಾಳಿ ಭಾರತೀಯ ಮಾಹಿತಿ ತಂತ್ರಜ್ಞಾನ ಕಂಪನಿ ಸಿಇಓಗಳ ನಿದ್ದೆ ಕೆಡಿಸುತ್ತಿವೆ.

ಜಾಗತಿಕ ಸುರಕ್ಷತಾ ಸೇವೆ ನೀಡುವ ಸಿಮ್ಯಾಂಟೆಕ್ ನಡೆಸಿರುವ ಅಧ್ಯಯನದ ಪ್ರಕಾರ, ಜಾಗತಿಕ ಐಟಿ ಚಟುವಟಿಕೆಗಳ ಕೇಂದ್ರವಾಗಿರುವ ಬೆಂಗಳೂರಿನಲ್ಲಿನ ಐಟಿ ಕಂಪನಿಗಳು 2009ರಲ್ಲಿ ಸೈಬರ್ ಅಪರಾಧದಿಂದ 5.8 ಮಿಲಿಯನ್ ರು.ಗಳಷ್ಟು ನಷ್ಟ ಅನುಭವಿಸಿವೆ.

ಭಾರತದ ಸಿಲಿಕಾನ್ ವ್ಯಾಲಿ ಎಂದೇ ಕರೆಸಿಕೊಂಡಿರುವ ಬೆಂಗಳೂರಿನಲ್ಲಿ ನೂರಾರು ಐಟಿ ಕಂಪನಿಗಳು ಬೀಡುಬಿಟ್ಟಿವೆ. ಪ್ರಮುಖ ಕಂಪನಿಗಳ ಮೇಲೆ ಭಯೋತ್ಪಾದಕ ದಾಳಿಯ ಬೆದರಿಕೆಯೂ ಇಲ್ಲದಿಲ್ಲ. ಆದರೆ, ಇವೆಲ್ಲವುಗಳಿಗಿಂತ ಹೆಚ್ಚಿನ ಬೆದರಿಕೆ ಒಡ್ಡುತ್ತಿರುವುದು ಸೈಬರ್ ದಾಳಿ. ಶೇ.66ರಷ್ಟು ಕಂಪನಿಗಳು ಬಾಹ್ಯ ಮತ್ತು ಆಂತರಿಕ ಸೈಬರ್ ದಾಳಿಯ ಬೆದರಿಕೆ ಇದೆ ಎಂದು ಹೇಳಿವೆ.

ಹಣಕ್ಕಾಗಿ ಕಂಪನಿಯ ಪ್ರಮುಖ ಮತ್ತು ಗುಪ್ತ ಮಾಹಿತಿಗಳನ್ನು ಕದಿಯಲಾಗುತ್ತಿದೆ. ಇಂಟರ್ನೆಟ್ ಮುಖಾಂತರ ಸರ್ವರ್ ಗಳನ್ನು ಹ್ಯಾಕ್ ಮಾಡಲಾಗಿದೆ, ಮಾಹಿತಿ ಸಂಗ್ರಣಾ ಉಪಕರಣಕ್ಕೆ ಕನ್ನ ಹಾಕಲಾಗಿದೆ. ಇದರಿಂದಾಗಿ ಮಾಹಿತಿ ತಂತ್ರಜ್ಞಾನ ಕಂಪನಿಗಳ ಉತ್ಪಾದನಾ ಸಾಮರ್ಥ್ಯದಲ್ಲಿ ಭಾರೀ ಇಳಿತ ಕಂಡುಬಂದಿದೆ ಎಂಬುದು ಸಿಮ್ಯಾಂಟೆಕ್ ಇಂಡಿಯಾ ಕಂಪನಿಯ ನಿರ್ವಹಣಾಧಿಕಾರಿ ವಿಶಾಲ್ ಅವರ ಅಭಿಮತ.

ಸೈಬರ್ ದಾಳಿಗಳು ಕಂಪನಿಯ ಹಣಕಾಸು ಸ್ಥಿತಿಯ ಮೇಲೆ ಮಾತ್ರವಲ್ಲ, ಇದರಿಂದಾಗಿ ಉದ್ಯೋಗಿ ಮತ್ತು ಗ್ರಾಹಕರ ಸಂಖ್ಯೆ ಕ್ಷೀಣಿಸಿದೆ ಹಾಗು ಕಂಪನಿಗಳ ಪ್ರತಿಷ್ಠೆಗೂ ಭಾರೀ ಹೊಡೆತ ನೀಡಿವೆ ಎಂದು ವಿಶಾಲ್ ಹೇಳಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X