ರಾಜಸ್ಥಾನದಲ್ಲಿ ಹುಲಿಮರಿಗಳ ನಿಗೂಢ ಸಾವು
ರಾಜಸ್ಥಾನ,
ಮಾ. 8: ಇಲ್ಲಿನ ರಣಥಂಬೋರ್ ರಾಷ್ಟ್ರೀಯ ಉದ್ಯಾನದಲ್ಲಿದ್ದ ಎರಡು ಗಂಡು ಹುಲಿಮರಿಗಳು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದೆ. ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಈ ಹುಲಿಮರಿಗಳ ಶವ ರಾಷ್ಟ್ರೀಯ ಉದ್ಯಾನವನ ಗಡಿಯಲ್ಲಿ ಸಿಕ್ಕಿದೆ. ಈ ಮರಿಗಳ ತಾಯಿ ಹುಲಿಗಳು ನಾಪತ್ತೆಯಾಗಿರುವುದು ಆತಂಕಕಾರಿ ವಿಷಯವಾಗಿದೆ. id="toptextpromo">ರಾಷ್ಟ್ರೀಯ
ಉದ್ಯಾನವನದ ಗಡಿಯಲ್ಲಿ ಎರಡು ಮೇಕೆಗಳ ಜೊತೆ ಹುಲಿ ಮರಿಗಳ ಶವ ಪತ್ತೆಯಾಗಿದೆ. ಹುಲಿಗಳನ್ನು ವಿಷವಿಕ್ಕಿ ಕೊಂದಿರುವ ಸಾಧ್ಯತೆಗಳಿವೆ. ಮರಿಗಳು ಸಾವನ್ನಪ್ಪಿ ಎರಡು ಮೂರುದಿನಗಳಾಗಿವೆ ಎಂದು ರಾಜಸ್ಥಾನದ ಮುಖ್ಯ ಅರಣ್ಯಾಧಿಕಾರಿ ಆರ್ ಎನ್ ಮೆಹ್ರೋತ್ರ ಹೇಳಿದರು. id='are-slot-1' class='oiad oi-axt oiadv'> id='top-searched-articles'>ಇದು
ಸ್ಥಳೀಯ ಗ್ರಾಮಸ್ಥರ ಕೈವಾಡದ ಶಂಕೆ ವ್ಯಕ್ತಪಡಿಸಿದಮೇಹ್ರೋತ್ರ,ಮರಣೋತ್ತರ ಪರೀಕ್ಷೆಯ ನಂತರ ಹೆಚ್ಚಿನ ವಿವರಗಳು ಲಭ್ಯವಾಗಲಿದೆ ಎಂದರು. ರಣ ಥಂಬೋರ್ ನಲ್ಲಿ ಸುಮಾರು 40 ಹುಲಿಗಳಿವೆ ಎಂದು 2009ರ ಗಣತಿ ಹೇಳುತ್ತದೆ. ಒಟ್ಟಾರೆ ಭಾರತದಲ್ಲಿ 1411ಹುಲಿಗಳಿವೆ ಎಂದು ಲೆಕ್ಕ ಹಾಕಲಾಗಿದೆ











Click it and Unblock the Notifications