ತಪ್ಪು ಮಾಡದ ನನಗೆ ಶಿಕ್ಷೆ ಏಕೆ, ಶಿವೇಂದ್ರ ಸಿಂಗ್
ನವದೆಹಲಿ,
ಮಾ. 2 : ಯಾವುದೇ ತಪ್ಪು ಮಾಡದ ನನಗೆ ನಿಷೇಧದಂತಹ ಶಿಕ್ಷೆ ಏಕೆ ? ನಾನೇನು ತಪ್ಪು ಮಾಡಿರುವೆ ಎಂದು ಇಂತಹ ಶಿಕ್ಷೆಗೆ ಗುರಿಪಡಿಸುತ್ತಿದ್ದೀರಿ. ವಿಶ್ವ ಹಾಕಿ ಪಂದ್ಯಾವಳಿಯಲ್ಲಿ ಸಾಂಪ್ರದಾಯಕ ಎದುರಾಳಿ ಪಾಕಿಸ್ತಾನದ ವಿರುದ್ಧ ಗೆಲುವ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಿವೇಂದ್ರ ಸಿಂಗ್ ಅವರ ಪ್ರಶ್ನೆ. id="toptextpromo">ಮೈದಾನದಲ್ಲಿ
ಪಾಕ್ ಆಟಗಾರ ಪರೀದ್ ಅಹ್ಮದ್ ಅವರೊಂದಿಗೆ ಒರಟು ಪ್ರದರ್ಶನ ನೀಡಿದ್ದರಿಂದ ವಿಶ್ವಕಪ್ ಹಾಕಿ ಫೆಡರೇಷನ್ ಮೂರು ಪಂದ್ಯಗಳ ನಿಷೇಧ ಹೇರಿತ್ತು. ಇದನ್ನು ಪ್ರಶ್ನಿಸಿ ಹಾಕಿ ಇಂಡಿಯಾ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ಫೆಡರೇಷನ್ ಮೂರು ದಿನಗಳಿಂದ ಎರಡು ಪಂದ್ಯಗಳ ನಿಷೇಧವನ್ನು ಖಾಯಂಗೊಳಿಸಿದೆ. id='are-slot-1' class='oiad oi-axt oiadv'> id='top-searched-articles'>ಇದಕ್ಕೆ
ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಿವೇಂದ್ರ ಸಿಂಗ್, ತಪ್ಪೆ ಮಾಡದ ನನಗೆ ಶಿಕ್ಷೆ ಏಕೆ ಎಂದು ಪ್ರಶ್ನಿಸಿದ್ದಾರೆ. ಫೆಡರೇಷನ್ ನೀಡಿರುವ ಆದೇಶ ತಂಬಾ ಬೇಸರ ತರಿಸಿದೆ. ಆಸ್ಟ್ರೇಲಿಯಾ ಮತ್ತು ಸ್ಪೇನ್ ವಿರುದ್ಧ ಪಂದ್ಯಕ್ಕೆ ಶಿವೇಂದ್ರ ಸಿಂಗ್ ಅಲಭ್ಯರಾಗಲಿದ್ದಾರೆ.











Click it and Unblock the Notifications